ಬೆಂಗಳೂರು : ಬೆಂಗಳೂರು ಮೆಟ್ರೋ ರೇಲ್ ಕಾರ್ಪೋರೇಷನ್ ಲಿ. ಹಳದಿ ಮಾರ್ಗದಲ್ಲಿ ಸಂಚಾರ ಮಾಡಲು ಚೀನಾದಿಂದ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದ ಚಾಲಕ ರಹಿತ ಮೆಟ್ರೋ ರೈಲನ್ನು ಅನ್‌ಲೋಡ್ ಮಾಡಿ ಅನಾವರಣ ಗೊಳಿಸಲಾಯಿತು.
ಕೋವಿಡ್ ಲಸಿಕೆ ಪಡೆದವರಿಗೆ ಬಿಗ್‌ಶಾಕ್: ಸಂಶೋಧನೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ!
ನಮ್ಮ ಮೆಟ್ರೋ ಯೆಲ್ಲೋ ಮಾರ್ಗದ ಮೊದಲ ಡ್ರೈವರ್ ಲೆಸ್ ಮೆಟ್ರೋದ ಮೊದಲ ಫೋಟೋ ಇದೀಗ ರಿವೀಲ್ ಆಗಿದೆ.ಚೀನಾ ತಯಾರಿಸಿರುವ ಈ ಮೆಟ್ರೋದ ಬೋಗಿಗಳನ್ನು ಫೆಬ್ರವರಿ 6 ರಂದು ಸಮುದ್ರ ಮಾರ್ಗವಾಗಿ ಚೆನ್ನೈಗೆ ಬಂದರು ಮೂಲಕ ಲಾರಿಗಳಲ್ಲಿ ಬೆಂಗಳೂರಿಗೆ ತರಲಾಗಿತ್ತು. ಸದ್ಯ ರಾಜ್ಯದ ಮೊದಲ ಡ್ರೈವರ್ ಲೆಸ್ ಮೆಟ್ರೋ ರೈಲು ಸಂಚಾರಕ್ಕೆ ಸಜ್ಜಾಗಿದೆ.
BREAKING : ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಯುವತಿಯ ಮೃತದೇಹ ಪತ್ತೆ
ಹೆಬ್ಬಗೋಡಿ ಡಿಪೋದ ಅನ್‌ಲೋಡಿಂಗ್ ಪ್ರದೇಶದಲ್ಲಿ ಬೆಂಗಳೂರು ಮೆಟ್ರೋದ ಡ್ರೈವಿಂಗ್ ಲೆಸ್ ರೈಲ್ವೆ ಕೋಚ್‌ನ ಮೊದಲ ಚಿತ್ರಗಳನ್ನು ಪೋಸ್ಟ್ ಮಾಡಿದೆ. ಅವರು ಸುದ್ದಿಯನ್ನು ಟ್ವಿಟರ್‌ಗೆ ತೆಗೆದುಕೊಂಡು ನವೀಕರಣವನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಮಾದರಿ ರೈಲನ್ನು ಬೆಂಗಳೂರು ಮೆಟ್ರೋದ ಹಳದಿ ಮಾರ್ಗಕ್ಕಾಗಿ ಗೊತ್ತುಪಡಿಸಲಾಗಿದೆ. ಇದು ಸಿಲ್ಕ್ ಬೋರ್ಡ್ ಜಂಕ್ಷನ್ ಮೂಲಕ ಹಾದುಹೋಗುವ ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಚಲಿಸುತ್ತದೆ.
ಝೀ ಎಂಟರ್‌ಟೈನ್‌ಮೆಂಟ್ ಸೋನಿಯೊಂದಿಗೆ $10 ಬಿಲಿಯನ್ ವಿಲೀನಕ್ಕೆ ಪುನರ್ ಪ್ರಯತ್ನ
ಮುಂದಿನ ದಿನಗಳಲ್ಲಿ ಕಾಳೇನ ಅಗ್ರಹಾರದಿಂದ ನಾಗವಾರ ಮಾರ್ಗ, ಏರ್‌ಪೋರ್ಟ್ ಮಾರ್ಗದಲ್ಲೂ ಡ್ರೈವರ್ ಲೆಸ್ ಮೆಟ್ರೋ ಓಡಾಟ ನಡೆಸಲು ಸಕಲ ತಯಾರಿ ನಡೆಸಲಾಗಿದೆ. ಆರಂಭಿಕವಾಗಿ ಹಳದಿ ಮಾರ್ಗದಲ್ಲಿ ಪ್ರಾರಂಭ ಮಾಡಿ ನೀಲಿ ಮಾರ್ಗಕ್ಕೆ ವಿಸ್ತರಣೆ ಬಳಿಕ ನೇರಳೆ, ಹಸಿರು ಮಾರ್ಗಕ್ಕೂ ಈ ವ್ಯವಸ್ಥೆ ಅಳವಡಿಸಲು ಚಿಂತನೆಯನ್ನು BMRCL ಅಧಿಕಾರಿಗಳು ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
First Photos of the unwrapped prototype Train ( Driving Motor Coach) at the unloading area of Hebbagodi depot today . FKI pic.twitter.com/PFd3IJV49y
— ನಮ್ಮ ಮೆಟ್ರೋ (@OfficialBMRCL) February 20, 2024