ಬೆಂಗಳೂರು : ಸತತ ಒಂದು ಗಂಟೆಗಳ ಕಾಲ ಅವರೇ ಹೇಗೆ ಮೆಟ್ರೋ ಸಂಚಾರದಲ್ಲಿ ತಾಂತ್ರಿಕ ದೋಷದಿಂದ ವ್ಯತ್ಯಯ ಉಂಟಾಗಿದ್ದು ಇದೀಗ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಇದೀಗ ಪುನಃ ಆರಂಭವಾಗಿದೆ.
ಮೆಟ್ರೋ ಸಂಚಾರದಲ್ಲಿ ಉಂಟಾಗಿದ್ದ ತಾಂತ್ರಿಕ ದೋಷವನ್ನು ಬಿಎಮ್ಆರ್‌ಸಿಎಲ್ ಇದೀಗ ಸರಿಪಡಿಸಿದೆ. ಯಥಾಸ್ಥಿಯಲ್ಲಿ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಿದೆ. ನೇರಳೆ ಮಾರ್ಗದಲ್ಲಿನ ರೈಲು ಒಂದು ಗಂಟೆ ಬಳಿಕ ನಮ್ಮ ಮೆಟ್ರೋ ಸಂಚಾರ ಪುನಃ ಆರಂಭವಾಗಿದೆ. ನಮ್ಮ ಮೆಟ್ರೋದಲ್ಲಿ ತಾಂತ್ರಿಕ ಸಮಸ್ಯೆ ಪರಿಹಾರವಾಗಿದೆ. ನೇರಳೆ ಮಾರ್ಗದಲ್ಲಿ ಇದೀಗ ಮೆಟ್ರೋ ರೈಲುಗಳು ಸಂಚರಿಸುತ್ತೇವೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.ಸರಿಯಾದ ಸಮಯಕ್ಕೆ ರೈಲುಗಳು ಸಂಚರಿಸುತ್ತಿವೆ ಎಂದು ಬಿಎಂಆರ್‌ಸಿಎಲ್ ಟ್ವೀಟ್ ಮೂಲಕ ತಿಳಿಸಿದೆ.
ಮೈಸೂರು : ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ : ಯುವತಿಯ ಜೊತೆ ಮಾತಾಡಿದಕ್ಕೆ ಕೊಲೆ ಆರೋಪ
ಇಂದು ಬೆಳ್ಳಿಗೆ ಚೆಲ್ಲಘಟ್ಟ ಹಾಗೂ ವೈಟ್ಫೀಲ್ಡ್ ನೇರಳೆ ಮಾರ್ಗದಲ್ಲಿ ಬೈಯಪ್ಪನ ಹಳ್ಳಿ ಹಾಗೂ ಗರುಡಾಚಾರ್ಯ ಪಾಳ್ಯ ಮಧ್ಯ ತಾಂತ್ರಿಕ ದೋಷದಿಂದ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿತ್ತು ಈ ವೇಳೆ ಪ್ರಯಾಣಿಕರು ಸಾಕಷ್ಟು ಪರದಾಟ ನಡೆಸಿದರು ಇದೀಗ ತಾಂತ್ರಿಕ ದೋಷ ಸರಿಪಡಿಸಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
The technical snag on the purple line is set right at 9.20 am and trains are moving at the schedules speeds . It takes some more time to normalise the cascading effects and to run as per schedule . Inconvenience caused is regretted.
— ನಮ್ಮ ಮೆಟ್ರೋ (@OfficialBMRCL) February 20, 2024