ರಾಮನಗರ : ಕಳೆದೊಂದು ವಾರದಿಂದ ವಕೀಲ ಸಂಘ ಮಾಡ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಪೋಲಿಸರು-ವಕೀಲರ ನಡುವಿನ ಸಂಘರ್ಷ ಮುಂದುವರಿದಿದೆ. 40 ವಕೀಲರ ಮೇಲೆ ಎಫ್‌ಐಆರ್ ಖಂಡಿಸಿ ಪ್ರತಿಭಟನೆ ನಡೆಯುತ್ತಿದೆ.
ಇದೆ ವೇಳೆ ವಕೀಲರ ಈ ಒಂದು ಪ್ರತಿಭಟನೆಗೆ ಮಾಜಿ ಸಿಎಂ HD ಕುಮಾರಸ್ವಾಮಿ ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಪ್ರಮುಖ ನಾಯಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ವಕೀಲರ ಸಮಸ್ಯೆ ಆಲಿಸಿದ ಹೆಚ್‌ಡಿಕೆ ಈ ವಿಚಾರದಲ್ಲಿ ಕೇವಲ ಪಿಎಸ್‌ಐ ಮಾತ್ರವಲ್ಲ, ಎಸ್ಪಿಯನ್ನೇ ಸಸ್ಪೆಂಡ್ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.
ರಾಮನಗರ ಪೊಲೀಸರ ವಿರುದ್ಧ ಕಿಡಿ ಕಾರಿದ ಕುಮಾರಸ್ವಾಮಿ ನೀವು ಅಧಿಕಾರಿಗಳ ಅಥವಾ ಗುಲಾಮರ ಎಂದು ಆಕ್ರೋಶ ಹೊರಹಾಕಿದ್ದಾರೆ. ನೀವು ಯಾವ ರೀತಿ ನಡೆದುಕೊಂಡಿದ್ದೀರಿ ಎಲ್ಲಾ ಗೊತ್ತಿದೆ. ಬೆಳಗ್ಗೆ ಅವನು ಯಾವನೋ ಎಂಪಿ ಫೋನ್ ಮಾಡುತ್ತಾನೆ. ಅಧಿಕಾರಿಗಳು ಚೇರ್ನಿಂದ ಎದ್ದು ಸೆಲ್ಯೂಟ್ ಹೊಡಿತಾರೆ. ಏನು ಮಾಡಿಕೊಳ್ಳುತ್ತಾರೆ ನಾನು ನೋಡಿಕೊಳ್ಳುತ್ತೇನೆ ಅಂತಾನೆ.
ಸದ್ಯಕ್ಕೆ ರಾಜ್ಯದಲ್ಲಿ ‘ಲೋಡ್ ಶೆಡ್ಡಿಂಗ್’ ಇಲ್ಲ : ಇಂಧನ ಸಚಿವ ಕೆಜೆ ಜಾರ್ಜ್ ಹೇಳಿಕೆ
ಎರಡು ಮೂರು ಸಾವಿರ ವಕೀಲರ ಜೊತೆ ಈಗ ನಡೆದುಕೊಳ್ಳುವುದು? ಇದೇನಾ ನೀವು ಆಡಳಿತ ನಡೆಸುವುದು? ಎಂದು ವಾಗ್ದಾಳಿ ನಡೆಸಿದ್ದಾರೆ. ರಾಜ್ಯವನ್ನ ಎಲ್ಲಿಗೆ ಒಯ್ಯಬೇಕು ಅಂತ ಅಂದುಕೊಂಡಿದ್ದೀರಿ ಅಧಿಕಾರಿಗಳು ಗುಲಾಮರಾಗಬಾರದು ಎಂದು ಕಿಡಿ ಕಾರಿದರು.
ಯಾರೋ ರಫೀಕ್ ಎಂಬಾತ ವಕೀಲರ ಮೇಲೆ ದೂರು ನೀಡಿದ್ದಾನೆ. ಯಾರೋ ಪ್ರಗತಿಪರರು ವಕೀಲರ ಸಂಘದಲ್ಲಿ ಹೋಗಿ ಗಲಾಟೆ ಆಗಿದೆ ಅಂದರು. ಎಷ್ಟು ಜನ ಪ್ರಗತಿಪರರಿಗೆ ಗಾಯ ಆಗಿದೆ? ಎಷ್ಟು ಜನ ಆಸ್ಪತ್ರೆಗೆ ಸೇರಿದ್ದಾರೆ? ಇಲ್ಲಿ ಸ್ಥಳೀಯ ಶಾಸಕ, ಜಿಲ್ಲಾ ಮಂತ್ರಿ ಆಡಳಿತ ಮಾಡ್ತಿದ್ದೀರಾ ಅಥವಾ ಪ್ರಗತಿಪರರು ಆಡಳಿತ ಮಾಡ್ತಿದ್ದೀರಾ? ಎಂದು ಕಿಡಿ ಕಾರಿದರು.
BREAKING : ಮೈಸೂರಿನಲ್ಲಿ ವಿದ್ಯುತ್ ಪ್ರವಹಿಸಿ ಎಲೆಕ್ಟ್ರಿಷಿಯನ್ ಸಾವು
ಚಾನ್ ಪಾಷಾ ಎಂಬ ವ್ಯಕ್ತಿ ನ್ಯಾಯಾಂಗ ನಿಂದನೆ ಪೋಸ್ಟ್ ಹಾಕಿದ್ದ. ಆತನ ಮೇಲೆ ಯಾವ ಸೆಕ್ಷನ್ ಹಾಕಿದ್ರಿ? ಆತನ ಪರವಾಗಿ ವಕೀಲರ ಸಂಘಕ್ಕೆ ರಫೀಕ್ ಹಾಗೂ ಪ್ರಗತಿಪರರು ಹೋಗಿದ್ದಾರೆ. ಇದರಲ್ಲಿ ಸ್ಥಳೀಯ ಶಾಸಕನ ಕೈವಾಡ ಏನು ಎಂಬುದು ನನಗೆ ಗೊತ್ತು? ಬೆಂಗಳೂರಿನಿಂದ ಯಾವನು ಡೈರೆಕ್ಷನ್ ಕೊಟ್ಟ ಅಂತ ಗೊತ್ತು. ಈ ಘಟನೆಯನ್ನ ಮುಚ್ಚಿಹಾಕಿಸುವ ಹುನ್ನಾರ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
ವಸತಿ ಶಾಲೆಗಳಲ್ಲಿ ಕುವೆಂಪು ಘೋಷ ವಾಕ್ಯ ಬದಲಾವಣೆ : ಸದನದಲ್ಲಿ ವಾಕ್ಸಮರ