ಬೆಂಗಳೂರು : ಕುಂಬಳಗೋಡಿನ ರಾಮಸಂದ್ರದಲ್ಲಿ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ ಸಂಭವಿಸಿ ಮೂವರು ಸಜೀವ ದಹನ ವಾಗಿರುವ ಘಟನೆಗೆ ಸಂಬಂಧಿಸಿದಂತೆ ಘಟನೆಯಲ್ಲಿ ಮೃತಪಟ್ಟ ಮೂರನೇ ವ್ಯಕ್ತಿಯ ಗುರುತು ಪತ್ತೆಯಾಗಿದೆ.
ಚಿಕ್ಕಬಸ್ತಿ ನಿವಾಸಿ ಅರ್ಬಸ್ (14) ಎಂದು ಹೇಳಲಾಗುತ್ತಿದೆ. ಅರ್ಬಸ್ ದಿನಗೂಲಿ 500 ರೂ. ಗೆ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ.ಅಲ್ಲದೆ ಇದೆ ಘಟನೆಯಲ್ಲಿ ಚಾಲಕನಾಗಿದ್ದ ನಾಯಂಡಹಳ್ಳಿ ನಿವಾಸಿಯಾಗಿದ ಮಹಬೂಬ್ ಕೂಡ ಮೃತಾಪಟ್ಟಿದ್ದಾನೆ. ಮೆಹಬೂಬ್ ಚಾಲಕನಾ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.ಮೊದಲ ಬಾರಿಗೆ ಮಹೆಬೂಬ್ ಕಾರ್ಖಾನೆಗೆ ತೆರಳಿದ್ದ ಪರ್ಫ್ಯೂಮ್ ಕಾರ್ಖಾನೆಯಲ್ಲಿ ಖಾಲಿ ಬಾಟಲಿ ಅನ್ ಲೋಡ್ ಮಾಡುತ್ತಿದ್ದ.
ಮನೆಯಲ್ಲಿಯೇ ದುಡಿಯುವ ‘ಮಹಿಳೆಯ’ ಕೆಲಸ ಅಮೂಲ್ಯವಾದದು, ಅದಕ್ಕೆ ಬೆಲೆ ಕಟ್ಟಲಾಗದು: ಸುಪ್ರಿಂಕೋರ್ಟ್
ಗೋಡನ್ ನೋಡಲು ಮೆಹಬೂಬ್ ಈ ವೇಳೆ ಒಳಗೆ ಹೋಗಿದ್ದ.ಅದೇ ಸಂದರ್ಭದಲ್ಲಿ ಗೋಡೌನ್ ನಿಂದ ಹೊರಗಡೆ ಬರುವಾಗ ಆತನಿಗೆ ಕರೆ ಬಂದಿರುತ್ತೆ. ಗೋಡೌನ್ ನಲ್ಲೆ ಚಾಲಕ ಮೆಹಬೂಬ್ ನಿಂತು ಮಾತನಾಡುತ್ತಿದ್ದ ಏಕಾಏಕಿ ಬೆಂಕಿ ಹೊತ್ತಿಕೊಂಡು ಹೊರಗೆ ಬರಲಾಗದೆ ಮೆಹಬೂಬ್ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಮಾಲೀಕನ ವಿರುದ್ಧ FIR
ಕುಂಬಳಗೋಡಿನ ರಾಮಸಂದ್ರದಲ್ಲಿ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ ಸಂಭವಿಸಿ ಮೂವರು ಸಜೀವ ದಹನ ವಾಗಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಜಾಗದ ಮಾಲೀಕ ವಿಠ್ಠಲ್ ವಿರುದ್ಧ FIR ದಾಖಲಾಗಿದೆ.ಗೋಡೌನ್ ನಲ್ಲಿ ಸಲೀಂ ಎಂಬಾತ ಪರ್ಫ್ಯೂಮ್ ಶೇಖರಣೆ ಮಾಡುತ್ತಿದ್ದ ಎನ್ನಲಾಗಿದೆ. ಪ್ರಕರಣ ಕುರಿತಂತೆ ಜಾಗದ ಮಾಲೀಕ ವಿಠ್ಠಲ್ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಮಾಲೀಕ ವಿಠಲ್ ಪರಾರಿಯಾಗಿದ್ದಾನೆ.
ಐಪಿಸಿ ಸೆಕ್ಷನ್ 420, 303, 304, 464, 64, 67 ಅಡಿ ಪ್ರಕರಣ ದಾಖಲಾಗಿದೆ.ಕುಂಬಳಗೋಡಿನ ರಾಮಸಂದ್ರದಲ್ಲಿ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ ಸಂಭವಿಸಿ ಬೆಂಕಿಯ ಕೆನ್ನಾಲಿಗೆಗೆ ಇಡೀ ಕಾರ್ಖಾನೆ ಧಗ ಧಗನೆ ಹೊತ್ತಿ ಉರಿದು ನಿನ್ನೆ ನಡೆದ ಅಗ್ನಿ ದುರಂತದಲ್ಲಿ ಮೂವರು ಮೃತಪಟ್ಟಿದ್ದರು.
ಶಾಲೆಗಳಲ್ಲಿ ಬದಲಾದ ಧೇಯವಾಕ್ಯ : ಇಂದು ವಿಧಾನಸಭೆಯಲ್ಲಿ ಪ್ರಸ್ತಾಪಕ್ಕೆ ಬಿಜೆಪಿ ಸಜ್ಜು