ಬೆಂಗಳೂರು : ಪ್ರತಿಷ್ಠಿತ ಹೋಟೆಲ್ಗಳಿಗೆ ಕ್ಯಾಷಿಯರ್ ಕೆಲಸಕ್ಕೆ ಸೇರಿಕೊಂಡು ಗ್ರಾಹಕರು ನೀಡುವ ನಗದು ದೋಚಿ ಪರಾರಿಯಾಗುತ್ತಿದ್ದ ಆರೋಪಿಯನ್ನು ರೇಡ್ ಹ್ಯಾಂಡ್ ಆಗಿ ಸೆರೆಸಿಕ್ಕ ಆರೋಪಿಯನ್ನು ಇದೀಗ ಮಾಲೀಕರು ಆರೋಪಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬನಶಂಕರಿಯ ಕತ್ರಿಗುಪ್ಪೆ ನಿವಾಸಿ ಎಂ. ಎಸ್ ರವಿಕುಮಾರ್ 66) ಬಂಧಿತ ಆರೋಪಿಯಾಗಿದ್ದಾನೆ. ದೇವನಹಳ್ಳಿ ಬಳಿಯ ನಂದಗೋಕುಲ ಹೋಟೆಲ್ನಲ್ಲಿ ಕ್ಯಾಷಿಯರ್ ಕೆಲಸಕ್ಕೆ ಸೇರಿದ್ದಈ ಮಾಹಿತಿ ತಿಳಿದ ಕೆ.ಆರ್.ಪುರ ಬಳಿಯ ಭಟ್ಟರಹಳ್ಳಿಯ ನ್ಯೂ ಉಡುಪಿ ಗ್ಯಾಂಡ್ ಹೋಟೆಲ್ ಮಾಲೀಕ ಸತೀಶ್ ಶೆಟ್ಟಿ ಸ್ಥಳಕ್ಕೆ ಹೋಗಿ ಹಿಡಿದು ಕೆ.ಆರ್.ಪುರ ಠಾಣೆಗೆ ಒಪ್ಪಿಸಿದ್ದಾರೆ.
ಲೈಂಗಿಕ ತೃಪ್ತಿಗಾಗಿ ತನ್ನ ‘ಖಾಸಗಿ ಅಂಗಕ್ಕೆ’ ಬ್ಯಾಟರಿಗಳನ್ನು ಇಟ್ಟುಕೊಂಡಿದ್ದ ವ್ಯಕ್ತಿ! ಬೆಚ್ಚಿ ಬಿದ್ದ ವೈದ್ಯರು
ಇದರ ಮೇರೆಗೆ ಪೊಲೀಸರು ತನಿಖೆ ಕೈ ಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಂ.ಕಾಂ ಓದಿರುವ ರವಿಕುಮಾರ್, ದೊಡ್ಡ ದೊಡ್ಡ ಹೋಟೆಲ್ ಮಾಲೀಕರ ಬಳಿಗೆ ಹೋಗಿ ನಾನು ಇಂತಹ ಜಾತಿಗೆ ಸೇರಿದವ ಪ್ರತಿಷ್ಠಿತ ಹೋಟೆಲ್ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡಿದ ಅನುಭವ ಇದೆ. ವಯಸ್ಸಾಗಿದೆಯಲ್ಲದೆ ಆರ್ಥಿಕವಾಗಿ ಸಂಕಷ್ಟವಿದ್ದು ಕೆಲಸ ಕೊಟ್ಟರೆ ಮಾಡುವುದಾಗಿ ಗೋಗರೆದು ಕೆಲಸಕ್ಕೆ ಸೇರಿಕೊಳ್ಳುತ್ತಿದ್ದ.
ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಮೋದಿ ಹಿಂದೆ ಒಂದಾಗಬೇಕು :ಸಚಿವ ಅಮಿತ್ ಶಾ
ಗ್ರಾಹಕರು ನಗದು ರೂಪದಲ್ಲಿ ಹಣ ಪಾವತಿ ಮಾಡಿದಾಗ ಮತ್ತು ಇನ್ನಿತರ ಖರ್ಚಿಗೆ ನಗದು ಸಂಗ್ರಹ ಮಾಡಿದಾಗ ಮಾಲೀಕರಿಗೆ ಗೊತ್ತಾಗದಂತೆ ದೋಚಿ ಪರಾರಿಯಾಗುತ್ತಿದ್ದ. ಇದೇ ರೀತಿಯಲ್ಲಿ ಹಲವು ಪ್ರತಿಷ್ಠಿತ ಹೋಟೆಲ್ ಮಾಲೀಕರಿಗೆ ವಂಚನೆ ಮಾಡಿದ್ದ.ಹೋಟೆಲ್ ಮಾಲೀಕರಿಗೆ ವಂಚಿಸಿದ ಹಣವನ್ನು ರವಿಕುಮಾರ್, ಜೂಜಾಟವಾಡಿ ಕಳೆಯುತ್ತಿದ್ದ. ಒಂದಿಷ್ಟು ಹಣವನ್ನು ಆನ್ಲೈನ್ನಲ್ಲಿ ಷೇರು ಮಾರುಕಟ್ಟೆಯಲ್ಲಿ ವಿನಿಯೋಗ ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದಾನೆ. ಈ ಬಗ್ಗೆ ತನಿಖೆ ನಡೆಸಿದಾಗ ಮಾತ್ರ ಸತ್ಯಾಂಶ ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
BREAKING : ಉತ್ತರಪ್ರದೇಶದಲ್ಲಿ ಪರೀಕ್ಷೆ ವೇಳೆ ನಿದ್ರೆ ತಪ್ಪಿಸಲು ‘ಉಗ್ರ ಮಾತ್ರೆಗೆ’ ಮೊರೆಹೋದ ಮಕ್ಕಳು!