ಹಾವೇರಿ : ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಾದ ಐದು ಗ್ಯಾರಂಟಿ ಯೋಜನೆಗಳು ಜಾರಿ ಆಗುವುದರಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ನಮ್ಮ ವಿರೋಧಿಗಳು ಹೇಳಿದ್ದರು. ಆದರೆ ಇದೀಗ ರಾಜ್ಯ ಸುಭದ್ರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹಾವೇರಿಯಲ್ಲಿ 411 ಕೋಟಿಯರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಈ 5 ಗ್ಯಾರಂಟಿ ಗಳಿಂದ ರಾಜ್ಯದ ಜನತೆ ಸಂತೋಷವಾಗಿದ್ದಾರೆ. ಅಲ್ಲದೆ ಮಹಿಳೆಯರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಆದರೆ ವಿರೋಧಿಗಳು ರಾಜ್ಯದಿವಾಳೆ ಆಗುತ್ತದೆ ಎಂದು ಹೇಳಿದರು ಆದರೆ ಇದೀಗ ರಾಜ್ಯ ಸುಭದ್ರವಾಗಿದೆ ಎಂದು ಅವರು ತಿಳಿಸಿದರು.
ಅಲ್ಪಸಂಖ್ಯಾತ ಸಮುದಾಯದವರಿಗೆ ಗುಡ್‌ನ್ಯೂಸ್: 1ಲಕ್ಷ ರೂ.ವರೆಗೆ ʻಸ್ವಯಂ ಉದ್ಯೋಗʼಕ್ಕೆ ಅರ್ಜಿ ಆಹ್ವಾನ!
ಈ ವೇಳೆ, ಆಶಾಕಿರಣ ಯೋಜನೆ ಜಾರಿ ಮಾಡಲಾಗಿದ್ದು, ದೃಷ್ಟಿ ದೋಷ ಇರುವ ಜನರಿಗೆ ಉಚಿತ ಕನ್ನಡಕ ಕೊಡುತ್ತಿದ್ದೇವೆ. ರಾಜ್ಯದ ಜನರಿಗೆ 5 ಗ್ಯಾರಂಟಿ ಯೋಜನೆ ನೀಡಲಾಗಿದೆ. ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ರೈತರ ಆತ್ಮಹತ್ಯೆ ಪ್ರಕಾರಣಗಳಿಗೆ ಪರಿಹಾರಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ಮೇಲೆ ಪರಿಹಾರ ಕೊಡುವ ವ್ಯವಸ್ಥೆ ಮಾಡುವಂತೆ ರೈತ ಸಂಘ ಮನವಿ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಮೂರು ತಿಂಗಳಲ್ಲೇ ದಾಖಲೆ ಒದಗಿಸಿ ಕೊಡಲು ಆಗಲ್ಲ, ಪೊಲೀಸರಿಗೆ ಈ ಬಗ್ಗೆ ಹೇಳುತ್ತೇನೆ. ನಾನು ರೈತ, ರೈತರ ಪರವಾಗಿ ಇದ್ದವನು.
BREAKING : ಬೆಂಗಳೂರಲ್ಲಿ ವಿದೇಶಿಗರ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ : ಮಹಿಳೆಯ ಬಂಧನ,ಮೂವರ ರಕ್ಷಣೆ
ರೈತ ಸಂಘದಲ್ಲಿ ಇದ್ದವನು. ರೈತರ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಎಂದು ಹೇಳಲು ಆಗಲ್ಲ. ಬಜೆಟ್ ಮೇಲೆ ರೈತರ ಪರವಾಗಿ ಏನು ಮಾಡಬೇಕೋ ಮಾಡುತ್ತೇನೆ. ಹೊಸ ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಕೊಡಲು ಅಧಿಕಾರಿಗಳಿಗೆ ಹೇಳುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಸರ್ವಾಧಿಕಾರಿಯಾಗುತ್ತಾರೆ: ಮಲ್ಲಿಕಾರ್ಜುನ ಖರ್ಗೆ