ಬಾಗಲಕೋಟೆ: ಕಲಾದಗಿ ಗ್ರಾಮದ ಗುರುಲಿಂಗೇಶ್ವರ ಮಠದ ಉತ್ತರಾಧಿಕಾರಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ರಂಭಾಪುರಿ ಜಗದ್ಗುರುಗಳ ಕಾರಿಗೆ ಮುತ್ತಿಗೆ ಹಾಕಿದ ಹಾಗೂ ಚಪ್ಪಲಿ ಎಸೆದ ಘಟನೆಗೆ ಸಂಬಂಧಿಸಿದಂತೆ ಕಲಾದಗಿ ಪೊಲೀಸ್ ಠಾಣೆಯಲ್ಲಿ 59 ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.ಎಂಟು ವರ್ಷಗಳ ಹಿಂದೆ ಸ್ವಾಮೀಜಿ ನಿಧನರಾಗಿದ್ದು, ರಂಭಾಪುರಿ ಶ್ರೀಗಳು ಮಠಕ್ಕೆ ಗಂಗಾಧರ ಸ್ವಾಮೀಜಿಯನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿದ್ದರು. ಆದರೆ, ಈ ನೇಮಕಕ್ಕೆ ಗ್ರಾಮದ ಕೆಲವು ಭಕ್ತರು ವಿರೋಧಿಸಿದ್ದರು. ಹೀಗಾಗಿ ವಿವಾದ ಕೋರ್ಟ್ ಮೆಟ್ಟಿಲೇರಿತ್ತು.
ಬೆಂಗಳೂರಿನಲ್ಲಿ ‘ಆಸ್ತಿ ದಾಖಲೆ ಡಿಜಿಟಲ್ ಸ್ಕ್ಯಾನಿಂಗ್’ನಲ್ಲಿ ದೋಖಾ: ಇಬ್ಬರ ವಿರುದ್ಧ ‘FIR’ ದಾಖಲು
ಶನಿವಾರ ಉದಗಟ್ಟಿಯಲ್ಲಿನ ಕಾರ್ಯಕ್ರಮಕ್ಕೆ ಹೊರಟಿದ್ದರ ರಂಭಾಪುರಿ ಶ್ರೀಗಳ ಕಾರಿಗೆ ಕೆಲವು ಭಕ್ತರು ಅಡ್ಡಗಟ್ಟಿ ಆಕ್ರೋಶ ಹೊರಹಾಕಿದ್ದರು. ಈ ವೇಳೆ ಮಹಿಳೆಯೋರ್ವಳು ಶ್ರೀಗಳ ಕಾರಿನತ್ತ ಚಪ್ಪಲಿ ಎಸೆದ ವಿಡಿಯೋ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ರಂಭಾಪುರಿ ಜಗದ್ಗುಗಳು ಈ ಘಟನೆ ನಡೆದಿರುವುದನ್ನು ತಳ್ಳಿಹಾಕಿದ್ದರು. ಆದರೀಗ 59 ಜನರ ವಿರುದ್ಧ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING :ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರಿಗೆ ಸಿಹಿ ಸುದ್ದಿ : ಕನಿಷ್ಠ ವೇತನ,ಡಿಎ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ
ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ .ಪಿ.ಅಮರನಾಥ ರೆಡ್ಡಿ, ಭಕ್ತ ರಂಗಪ್ಪ ಎಂಬುವರು ಪ್ರಕರಣ ದಾಖಲಿಸಿದ್ದು, ವಿವಾದ ನ್ಯಾಯಾಲಯದಲ್ಲಿರುವಾಗ ಕಾನೂನು-ಸುವ್ಯವಸ್ಥೆ ಹಾಳು ಮಾಡುವ, ಶಾಂತಿ ಕದಡುವ ಉದ್ದೇಶದಿಂದ ಗಲಾಟೆ ಹಾಗೂ ಶ್ರೀಗಳಿಗಾದ ಅವಮಾನ ಪರಿಗಣಿಸಿ ಎಫ್ಐಆರ್ ದಾಖಲಿಸಲಾಗಿದೆ. ಕಲಾದಗಿ ಗ್ರಾಮದಲ್ಲಿ ಕೆಲವರು ಶ್ರೀಗಳ ಕಾರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೋಲಿಸರು ಅವಕಾಶ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.
ರೈತ ವಿದ್ಯಾನಿಧಿ ವಿದ್ಯಾರ್ಥಿವೇತನಕ್ಕಾಗಿ ಆದಾಯ ಪ್ರಮಾಣಪತ್ರ ಸಲ್ಲಿಸಲು ಫೆಬ್ರವರಿ 29 ರವರೆಗೆ ಅವಕಾಶ