ಉಡುಪಿ : ಕೇಂದ್ರದಿಂದ ರಾಜ್ಯಕ್ಕೆ ನೀಡುವ ತೆರಿಗೆ ಪಾಲದಲ್ಲಿ ಕೇಂದ್ರ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯವನ್ನು ಖಂಡಿಸಿ ಸಂಸದ ಡಿಕೆ ಸುರೇಶ್ ಇತ್ತೀಚಿಗೆ ದೇಶ ವಿಭಜನೆಯ ಹೇಳಿಕೆ ನೀಡಿದ್ದರು. ಇದೀಗ ಕೇಂದ್ರ ಸರ್ಕಾರ ಒಂದು ವೇಳೆ ನಮ್ಮ ತೆರಿಗೆ ಪಾಲನ್ನು ನೀಡಿದರೆ ಮಹಿಳೆಯರಿಗೆ ಹೀಗಿರುವ 2000 ಜೊತೆ ಮತ್ತೆರಡು ಸಾವಿರ ಸೇರಿಸಿ 4000 ಕೊಡುತ್ತೇವೆ ಎಂದು ತಿಳಿಸಿದರು.
ಉಡುಪಿಯ ಹೋಬಳಿಗಳ ಗೃಹಲಕ್ಷ್ಮಿ ಯೋಜನಾ ಫಲಾನುಭವಿಗಳ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು,ನಮ್ಮ ರಾಜ್ಯದ ತೆರಿಗೆ ಹಣವನ್ನು ಉತ್ತರಪ್ರದೇಶ, ಬಿಹಾರ, ಒರಿಸ್ಸಾಗೆ ತೆಗೆದುಕೊಂಡು ಹೋದರೆ ನಮ್ಮಗಳ ಗತಿಯೇನು? ನಮ್ಮ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ ಎಂದರು.
ಇದರಿಂದಾಗಿ ಮಹಿಳೆಯರು ಗಂಡಂದಿರಿಗೆ ಊಟ ಹಾಕದೆ ತಿರುಗಾಡುತ್ತಾರೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಟೀಕಿಸಿದರು. ಆದರೆ ಇದುವರೆಗೂ ಯಾವೊಬ್ಬ ಗಂಡಸು ನನ್ನ ಹೆಂಡತಿ ನನಗೆ ಊಟ ಹಾಕುತ್ತಿಲ್ಲ ಎಂದು ಪೊಲೀಸ್ ಠಾಣೆಗೆ ದೂರು ಕೊಟ್ಟ ಉದಾಹರಣೆ ಇಲ್ಲ ಎಂದರು.
BREAKING : ಮಂಗಳೂರಿನ ಜೇರೋಸಾ ಶಾಲೆ ಪ್ರಕರಣ : ತನಿಖೆಗೆ IAS ಅಧಿಕಾರಿ ನೇಮಕ : ಸಚಿವ ದಿನೇಶ್ ಗುಂಡೂರಾವ್
‘ಮೈಗ್ರೇನ್ ತಲೆನೋವು’ ಕಾಡಿದ್ಯಾ.? ಈ ಸಲಹೆ ಅನುಸರಿಸಿ, ತಕ್ಷಣ ಪರಿಹಾರ ಸಿಗುತ್ತೆ
ಬೋರ್ಡ್ ಪರೀಕ್ಷೆಗೆ ಮುಂಚಿತವಾಗಿ ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡುವಂತೆ ಶಾಲೆಗಳಿಗೆ ‘CBSE’ ಸುತ್ತೋಲೆ