ಬೆಂಗಳೂರು : ಜಗತ್ತು ಎಷ್ಟೇ ಮುಂದುವರಿದರು ಕೂಡ ನಮ್ಮಲ್ಲಿನ ಕೆಲವು ಮೂಢನಂಬಿಕೆ ಹಾಗೂ ಕೆಲವು ಮೌಢ ಆಚರಣೆಗಳು ಇನ್ನೂ ಸಮಾಜದಲ್ಲಿ ಜೀವಂತವಾಗಿದೆ ಅದರಲ್ಲಿ ಬಾಲ್ಯ ವಿವಾಹ ಕೂಡ ಒಂದು. ಇದೀಗ ಬೆಂಗಳೂರಿನಲ್ಲಿ ಕೂಡ 14 ವರ್ಷದ ಬಾಲಕಿಯೊಂದಿಗೆ 24 ವರ್ಷದ ಯುವಕನ ಮದುವೆ ಮಾಡಲಾಗಿದೆ.
ಹೌದು ಬೆಂಗಳೂರಿನ ಕೂಗಳತೆ ದೂರದಲ್ಲಿ ಬಾಲ್ಯ ವಿವಾಹ ಪ್ರಕರಣ ಬೆಳಕಿಗೆ ಬಂದಿದೆ. 24 ವರ್ಷದ ಯುವಕನೊಂದಿಗೆ 14 ವರ್ಷದ ಬಾಲಕಿಯನ್ನು ಆಕೆಯ ಪೋಷಕರಿಗೆ ಹೇಳದೆ ದೊಡ್ಡಪ್ಪ ಮದುವೆ ಮಾಡಿಸಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಬಾಲಕಿಯ ತಾಯಿ ಬಾಲಕಿಯ ದೊಡ್ಡಪ್ಪ, ದೊಡ್ಡಮ್ಮ ಹಾಗೂ ಇತರರ ವಿರುದ್ಧ ಸರ್ಜಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ನನ್ನ ಮಗಳನ್ನು ಪುಸಲಾಯಿಸಿ ಫೆಬ್ರವರಿ 15 ರಂದು ಮದುವೆ ಮಾಡಿಸಲಾಗಿದೆ. ಮಗಳು ಇನ್ನೂ ಅಪ್ರಾಪ್ತಳಾಗಿದ್ದಾಳೆ. ಕೈವಾರದಲಿನ ಯಲಮ್ಮ ದೇವಾಲಯದಲ್ಲಿ ತಂದೆ ತಾಯಿಗೆ ಗೊತ್ತಿಲ್ಲದೆ ಹಲಸಿನಕಾಯಿಪುರ ಗ್ರಾಮದ ವಿನೋದ್ ಕುಮಾರ್ ಜೊತೆ ಮದುವೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
8 ವಾರಗಳಲ್ಲಿ ‘ಪೌರಕಾರ್ಮಿಕರಿಗೆ’ 90 ಕೋಟಿ ಇಪಿಎಫ್ ಬಾಕಿ ಪಾವತಿಸಿ: ಬಿಬಿಎಂಪಿಗೆ ಹೈಕೋರ್ಟ್ ಆದೇಶ
BREAKING : ಫೆ.24, 25ರಂದು ಬೆಂಗಳೂರಲ್ಲಿ ‘ರಾಷ್ಟ್ರೀಯ ಐಕ್ಯತ ಸಮಾವೇಶ’ : ಸಿಎಂ ಸಿದ್ದರಾಮಯ್ಯ ಹೇಳಿಕೆ
“ಗುಂಡಿಕ್ಕಿ ಕೊಲ್ಲಿ” ಈಶ್ವರಪ್ಪ ಹೇಳಿಕೆ: ಭಾಷೆ ಎಚ್ಚರಿಕೆಯಿಂದ ಬಳಸಲು ಹೈಕೋರ್ಟ್ ಮೌಖಿಕ ಸೂಚನೆ!