ಬೆಂಗಳೂರು : ಭಾರತ ಸಂವಿಧಾನ ಹಾಗೂ ಐಕ್ಯತ ಸಮಾವೇಶ ಹಾಗೂ ವಾಗಿರುವ ಹಿನ್ನೆಲೆಯಲ್ಲಿ ವಿಚಾರವಾಗಿ ಇದೆ ಫೆಬ್ರವರಿ 24 ಹಾಗೂ 25 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಐಕ್ಯತಾ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ವೈವಿಧ್ಯತೆಯಲ್ಲಿ ಏಕತೆ ಕಾಣುತ್ತಿರುವ ದೇಶ. ದೇಶದ ಜನತೆಗಾಗಿ ಅಂಬೇಡ್ಕರ್ ಸಂವಿಧಾನ ನೀಡಿದ್ದಾರೆ ಸಂವಿಧಾನ ಜಾರಿಯಾಗಿ 75 ವರ್ಷವಾಗಿದೆ.ಆದರೂ ಇಂದಿಗೂ ಸಾಮಾಜಿಕ ಆರ್ಥಿಕ ಅಸಮಾನತೆ ಇದೆ ಎಂದರು.
ಬಡವರು ದಲಿತರು ಹಿಂದುಳಿದವರು ಅವಕಾಶ ವಂಚಿತರಾಗಿದ್ದಾರೆ. ಶಿಕ್ಷಣ ಪಡೆಯುವುದರಿಂದ ಮೂಢನಂಬಿಕೆ ನಿರ್ಮೂಲನೆ ಆಗಲಿದೆ. ಆದರೆ ಕೆಲವರು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹೀಗಾಗಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದರು.
ಇದೇ ಫೆಬ್ರವರಿ 24, 25 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಐಕ್ಯತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಫೆಬ್ರವರಿ 24 ರಂದು ಉದ್ಘಾಟನೆ ಹಾಗೂ ಫೆಬ್ರುವರಿ 25 ರಂದು ರ್ಯಾಲಿ ಮಾಡಲಾಗುತ್ತದೆ. ಭಾರತದ ಸಂವಿಧಾನ ಜಾರಿಯಾಗಿ 75 ವರ್ಷ ಆಗಿದೆ. 31 ಜಿಲ್ಲೆಗಳಲ್ಲೂ ಸಂವಿಧಾನ ಶಾತ ಕಾರ್ಯಕ್ರಮ ನಡೆಯುತ್ತಿದೆ.
ಜನವರಿ 26ರಿಂದ ಸಂವಿಧಾನ ಜಾತ ಕಾರ್ಯಕ್ರಮ ನಡೆಯುತ್ತಿದೆ. ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವ ಕೆಲಸ ಆಗುತ್ತಿದೆ. ಸಂವಿಧಾನ ಏನು ಕೊಟ್ಟಿದೆ ಅನ್ನೋದು ಜನರಿಗೆ ಗೊತ್ತಾಗಬೇಕು.ಸಂವಿಧಾನ ಜಾರಿಯಾಗಿ 75 ವರ್ಷವಾದರೂ ಕೂಡ ಸಮಾನತೆ ಸಿಕ್ಕಿಲ್ಲ. ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
“ಗುಂಡಿಕ್ಕಿ ಕೊಲ್ಲಿ” ಈಶ್ವರಪ್ಪ ಹೇಳಿಕೆ: ಭಾಷೆ ಎಚ್ಚರಿಕೆಯಿಂದ ಬಳಸಲು ಹೈಕೋರ್ಟ್ ಮೌಖಿಕ ಸೂಚನೆ!
ಬಾಲರಾಮನಿಗೆ ಪ್ರತಿದಿನ ಒಂದು ಗಂಟೆ ವಿಶ್ರಾಂತಿ:ಇನ್ನುಂದೆ ಈ ಅವಧಿಯಲ್ಲಿ ‘ರಾಮಮಂದಿರ’ ಬಂದ್