ಬೆಂಗಳೂರು : ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮೇ 31ರವರೆಗೆ ಅವಧಿ ವಿಸ್ತರಿಸಿ ಸಾರಿಗೆ ಇಲಾಖೆ ಅಧಿಕೃತವಾಗಿ ಆದೇಶ ಹೊರಡಿಸಿದೆ. ಇದನ್ನೇ ದುರುಪಯೋಗಪಡಿಸಿಕೊಳ್ಳಲು ಹಲವು ಸೈಬರ್ ವಂಚಕರು ಮುಂದಾಗಿದ್ದು ನಕಲಿ ಕ್ಯೂ ಆರ್ ಕೋಡ್ ಗಳ ಮೂಲಕ ಗ್ರಾಹಕರ ಸಂಪೂರ್ಣ ಹಣವನ್ನು ಲಪಟಾಯಿಸಲು ಕಾದು ಕುಳಿತಿದ್ದಾರೆ.
ಹೌದು ಈ ಬಗ್ಗೆ ರಕ್ಷಿತ್ ಪಾಂಡೆ ಎನ್ನುವ ವ್ಯಕ್ತಿ ಎಕ್ಸ್ ಆ್ಯಪ್ ಮೂಲಕ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಕ್ಯೂ ಆರ್ ಕೋಡ್ ಸಮೇತ ಪೊಲೀಸರಿಗೆ ದೂರು ನೀಡಿದ್ದು ಸೈಬರ್ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ರಾಜ್ಯ ಸರ್ಕಾರದಿಂದ ನಂಬರ್ ಪ್ಲೇಟ್ ಅಳವಡಿಕೆಗಳು ಅವಧಿ ವಿಸ್ತರಣೆ ಆದೇಶ ಬಂದ ಬೆನ್ನಲ್ಲೇ ಇದೀಗ ಸೈಬರ್ ವಂಚಕರು ಫುಲ್ ಆಕ್ಟಿವ್ ಆಗಿದ್ದು, ಅಮಾಯಕ ಗ್ರಾಹಕರೇ ಇವರಿಗೆ ಟಾರ್ಗೆಟ್.ನೋಂದಣಿ ಬಳಿಕ ಸಿಗುವ ಕ್ಯೂ ಆರ್ ಕೋಡ್ಗಳನ್ನು ನಕಲಿ ಮಾಡುತ್ತಿದ್ದಾರೆ. ಕ್ಯೂ ಆರ್ ಕೋಡ್ ಟಚ್ ಮಾಡುತ್ತಿದ್ದಂತೆ ಅಪರಿಚಿತರ ಖಾತೆಗೆ ಲಿಂಕ್ ಹೋಗುತ್ತಿದ್ದು ಸ್ವಲ್ಪ ಎಮಾರಿದ್ರು ನಿಮ್ಮ ಖಾತೆಯಲ್ಲಿದ್ದ ಹಣ ಖದೀಮರ ಪಾಲಾಗುತ್ತೆ ಆದ್ದರಿಂದ ಆದಷ್ಟು ಗ್ರಾಹಕರು ಎಚ್ಚರದಿಂದಿರಿ.
I went online to get my hsrp plate registration and clicked on the first link. Filled in the details. The link led me to qr code and I opened to find the payee was a one named Mohd Asif.@BlrCityPolice @blrcitytraffic
For reference I'm attaching the qr so people don't get scammed pic.twitter.com/nwYSfrDlTm— Rakshith Pande (@PandeRakshith) February 16, 2024