ಬೆಂಗಳೂರು: ಡಿಜಿಟಲ್ ಪಾವತಿ ಸಿಸ್ಟಂಗೆ ಕೆಎಸ್‌ಆರ್‌ಟಿಸಿ ಕೂಡಾ ತೆರೆದುಕೊಳ್ಳಲಿದೆ. ಇನ್ನು ನಾಲ್ಕು ತಿಂಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮಾಡಿ ಟಿಕೆಟ್ ನೀಡುವ ಮಷಿನ್‌ಗಳು ನಿರ್ವಾಹಕರ ಕೈಯಲ್ಲಿ ಇರಲಿವೆ.
ಬಿಎಂಟಿಸಿ ಬಸ್‌ಗಳಲ್ಲಿ ಎರಡು ವರ್ಷಗಳ ಹಿಂದೆ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಪದ್ಧತಿಯನ್ನು ಜಾರಿಗೊಳಿಸಿದ್ದರೂ ಬಳಿಕ ಸ್ಥಗಿತಗೊಂಡಿತು. ಪಾಸ್ ಇರುವವರಿಗಷ್ಟೇ ಸೀಮಿತವಾಗಿದೆ. ವಾಯವ್ಯ ಸಾರಿಗೆ ನಿಗಮವು ಡಿಜಿಟಲ್ ಪಾವತಿ ಪದ್ಧತಿಯನ್ನು ಇತ್ತೀಚೆಗೆ ಅಳವಡಿಸಿಕೊಂಡಿತು. ಇದೀಗ ಕೆಎಸ್‌ಆರ್‌ಟಿಸಿ ಕೂಡಾ ಈ ಪದ್ಧತಿ ಅಳವಡಿಸಿಕೊಳ್ಳಲು ಮುಂದಾಗಿದೆ.ಎನ್‌ಡಬ್ಲ್ಯುಆರ್‌ಟಿಸಿ ಯಲ್ಲಿರುವಂತೆ ಕ್ಯೂ ಆರ್ ಕೋಡ್ ಅನ್ನು ನಿರ್ವಾಹಕ ಪ್ರತ್ಯೇಕವಾಗಿ ಕುತ್ತಿಗೆಗೆ ನೇತು ಹಾಕಿಕೊಳ್ಳುವ ಬದಲು ಸ್ಕ್ಯಾನಿಂಗ್ ಮತ್ತು ಟಿಕೆಟ್ ನೀಡುವ ಒಂದೇ ಮಷಿನ್ ಅನ್ನು ಕೆಎಸ್‌ಆರ್‌ಟಿಸಿ ಪರಿಚಯಿಸಲಿದೆ.
ನಮ್ಮ ನಿಗಮದಲ್ಲಿ 83 ಘಟಕಗಳಿವೆ. ಸದ್ಯ ಎಲೆಕ್ಟ್ರಿಕ್ ಟಿಕೆಟ್ ಮಷಿನ್‌ಗಳನ್ನು (ಇಟಿಎಂ) ಬಳಸಲಾಗುತ್ತಿದೆ. ಡಿಜಿಟಲ್ ಪೇಮೆಂಟ್ ಎನೇಬಲ್ (ಡಿಪಿಇ) ಇರುವ ಇಟಿಎಂಗಳ ಪೂರೈಕೆಯಾಗಬೇಕಿದೆ. 10 ಸಾವಿರ ಮಷೀನ್‌ಗಳು ಬೇಕಾಗಿದ್ದು, ಅದಕ್ಕಾಗಿ ಟೆಂಡರ್ ಕರೆಯಲಾಗಿದೆ. ಬಿಡ್ ಮಾಡಲು ಫೆ.18 ಕೊನೇ ದಿನವಾಗಿದೆ. ಬಳಿಕ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ. ಎಲ್ಲ ಘಟಕಗಳಿಗೆ ಈ ಮಷೀನ್ ಪೂರೈಸಲು ಕನಿಷ್ಠ 4 ತಿಂಗಳು ಬೇಕು’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಫೋನ್ ಪೇ, ಗೂಗಲ್ ಪೇ ಸಹಿತ ಯುಪಿಐ ಆಧಾರಿತ ಪಾವತಿ ಸ್ವೀಕರಿಸಿದರೆ ಆ ಮೊತ್ತವು ನೇರವಾಗಿ ಸಂಬಂಧಪಟ್ಟ ಡಿಪೊ ಖಾತೆಗೆ ಜಮೆ ಆಗಲಿದೆ. ಡಿಜಿಟಲ್ ಪಾವತಿ ಜತೆಗೆ ನಗದು ನೀಡಿ ಟಿಕೆಟ್ ಪಡೆಯುವ ಪದ್ಧತಿಯೂ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಮಕ್ಕಳನ್ನು ಉಳಿಸಿಕೊಳ್ಳಲು ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜೊತೆಗೆ ‘ಇಂಗ್ಲಿಷ್ ಭಾಷೆ’ ಕಲಿಕೆ : ಸಚಿವ ಮಧು ಬಂಗಾರಪ್ಪ
ನಾನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದಲೇ ಸ್ಪರ್ಧೆಸುತ್ತೇನೆ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಫೆಮಾ ಉಲ್ಲಂಘನೆ ಪ್ರಕರಣ: ಫೆ.19ರಂದು ವಿಚಾರಣೆಗಾಗಿ ಟಿಎಂಸಿ ನಾಯಕಿ ‘ಮಹುವಾ ಮೊಯಿತ್ರಾಗೆ’ ‘ಇಡಿ’ ಸಮನ್ಸ್