ಕೊಪ್ಪಳ:ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡುತ್ತಿದ್ದ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಗ್ರಾಮದ ಕೆಲವೆಡೆ ಈ ಪದ್ಧತಿಯ ಕುರಿತು ಬುಧವಾರ ಮಾಧ್ಯಮಗಳಲ್ಲಿ ವರದಿಯಾಗಿದೆ.
ದಲಿತರು ಗ್ರಾಮದ ನಿರ್ದಿಷ್ಟ ಹೋಟೆಲ್‌ಗೆ ಪ್ರವೇಶಿಸಿದರೆ, ಉಪಾಹಾರ ಗೃಹವನ್ನು ಮುಚ್ಚಲಾಗುವುದು ಎಂದು ಅವರು ಹೇಳಿದರು. ಅದೇ ರೀತಿ ಕ್ಷೌರದಂಗಡಿ, ದೇವಸ್ಥಾನ ಮತ್ತು ಗ್ರಾಮದ ಕೆರೆಗೆ ದಲಿತರ ಪ್ರವೇಶಕ್ಕೂ ನಿರ್ಬಂಧವಿತ್ತು.
ಈ ವರದಿಗಳ ಹಿನ್ನೆಲೆಯಲ್ಲಿ ಬುಧವಾರ ತಡರಾತ್ರಿ ಕ್ಷೌರಿಕನ ಅಂಗಡಿಯ ಯಂಕೋಬ ಹಡಪದ್ ಮತ್ತು ಆಂಜಿನಪ್ಪ ಹಾಗೂ ಹೋಟೆಲ್‌ನ ಸಂಜೀವಪ್ಪ ಗುಳದಳ್ಳಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೂವರಲ್ಲಿ ಯಂಕೋಬ ಮತ್ತು ಸಂಜೀವಪ್ಪ ಎಂಬುವರನ್ನು ಬಂಧಿಸಲಾಗಿದೆ.
ಆಂಜಿನಪ್ಪನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ತಿಳಿಸಿದ್ದಾರೆ.
ಶಾಂತಿ ಸಭೆ
ಕೊಪ್ಪಳದ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗತ್ತಿ ಹಾಗೂ ಡಿವೈಎಸ್ಪಿ ಮುತ್ತಣ್ಣ ಸಾವರಗೋಳ ಅವರು ಗುರುವಾರ ಎಲ್ಲ ಸಮುದಾಯದವರೊಂದಿಗೆ ಶಾಂತಿ ಸಭೆ ನಡೆಸಿದರು.
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದ್ದು, ಇಂತಹ ಘಟನೆಗಳು ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಶೀಘ್ರದಲ್ಲೇ ದೇಶದಲ್ಲಿ 500 ಕಿಮೀ ವ್ಯಾಪ್ತಿಯ ಜಲಾಂತರ್ಗಾಮಿ ‘ಉಡಾವಣಾ ಕ್ರೂಸ್’ ಕ್ಷಿಪಣಿ ಪರೀಕ್ಷೆ
ನಂತರ ದಲಿತರ ಪ್ರವೇಶಕ್ಕೆ ನಿರ್ಬಂಧ ಹೇರಿದ ಹೋಟೆಲ್‌ನಲ್ಲಿ ಎಲ್ಲರಿಗೂ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಅಧಿಕಾರಿಗಳು ಸಾರ್ವಜನಿಕವಾಗಿ ದಲಿತರನ್ನು ಗ್ರಾಮದೇವತೆ ಮತ್ತು ಆಂಜನೇಯ ದೇವರ ದೇವಸ್ಥಾನಗಳಿಗೆ ಕರೆದೊಯ್ದು ಅವರೊಂದಿಗೆ ಪೂಜೆ ಸಲ್ಲಿಸಿದರು.