ಉತ್ತರಕನ್ನಡ : ಸದಾ ವಿವಾದದ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿರುವ ಸಂಸದ ಅನಂತ್ ಕುಮಾರ್ ಹೆಗಡೆ ಇದೀಗ ಮತ್ತೊಂದು ವಿವಾದದ ಹೇಳಿಕೆ ಹೇಳುವ ಮೂಲಕ ಕಿಡಿ ಹೊತ್ತಿಸುವ ಕೆಲಸ ಮಾಡಿದ್ದಾರೆ. ಎಲ್ಲಿಯತನಕ ಇಸ್ಲಾಂ ಧರ್ಮ ಇರುತ್ತೋ ಅಲ್ಲಿಯವರೆಗೆ ಜಗತ್ತಿಗೆ ನೆಮ್ಮದಿ ಇಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಬಿಜೆಪಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಇಸ್ಲಾಂ ಧರ್ಮ ಇರುವವರಿಗೂ ನಮಗೆ ನೆಮ್ಮದಿ ಇಲ್ಲ. ಹೇಳಿಕೆ ನೀಡುವುದರಿಂದ ನನಗೇನು ಹೆದರಿಕೆ ಇಲ್ಲ. ಈಗ ಮೊನ್ನೆ ತಾನೆ ಮುಸ್ಲಿಂ ಧರ್ಮದ ಕುರಿತಾಗಿ ಹೇಳಿಕೆಗೆ FIR ದಾಖಲಾಗಿದೆ. ಸಿದ್ದರಾಮಯ್ಯ ಬಗ್ಗೆ ಹೇಳಿದಾಗ ಎಲ್ಲಾ ಮಸೀದಿಗಳು ಅಂತ ಹೇಳಿದ್ನಲ್ಲ ಆ ಸಂಬಂಧ ಒಂದು ಕೇಸ್ ಹಾಕಿದ್ದಾರೆ ಎಂದರು.
ಈ ಸಿದ್ದರಾಮಯ್ಯಾನಿಗೆ ಒಂದು ಥ್ಯಾಂಕ್ಸ್ ಹೇಳಲು ಬಯಸುತ್ತೇನೆ ಏಕೆಂದರೆ ಕಳೆದ ಹಲವು ವರ್ಷಗಳಿಂದ ನನ್ನ ಮೇಲೆ ಯಾವುದೇ ಕೇಸ್ ಇರಲಿಲ್ಲ ಇದರಿಂದ ನನಗೆ ಮುಜುಗರ ಉಂಟಾಗಿತ್ತು ಇದೀಗ ಕೆಎಸ್ಗಳು ಆಗುತ್ತಿರುವುದರಿಂದ ಸಿದ್ದರಾಮಯ್ಯನಿಗೆ ಥ್ಯಾಂಕ್ಸ್ ಹೇಳುತ್ತೇನೆ ಎಂದು ತಿಳಿಸಿದರು.
ವಿಧಾನ ಪರಿಷತ್ ಚುನಾವಣೆ: ರಾಜ್ಯದಲ್ಲಿ ಚುನಾವಣೆಯ 48 ಗಂಟೆ ಮುನ್ನ ‘ಮದ್ಯ ಮಾರಾಟಕ್ಕೆ’ ಹೈಕೋರ್ಟ್ ಬ್ರೇಕ್
ರಾಜ್ಯ ಸರ್ಕಾರದಿಂದ ‘HSRP ನಂಬರ್ ಪ್ಲೇಟ್’ ಅಳವಡಿಕೆಗೆ ಮತ್ತೊಂದು ಮಹತ್ವದ ಕ್ರಮ