ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ವರದಾನವಾಗಿ, ಕೇಂದ್ರ ಸರ್ಕಾರವು ಮಾರ್ಚ್ನಲ್ಲಿ ಶೇಕಡಾ 4 ರಷ್ಟು ಡಿಎ ಹೆಚ್ಚಳವನ್ನ ಘೋಷಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಅಂತೆಯೇ 4ರಷ್ಟು ಹೆಚ್ಚಳದ ನಂತರ, ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವು ಶೇಕಡಾ 50ಕ್ಕೆ ಹೆಚ್ಚಾಗುತ್ತದೆ.
ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದ (CPI-IW) 12 ತಿಂಗಳ ಸರಾಸರಿ 392.83 ರಷ್ಟಿದೆ. ಇಟಿ ವರದಿಯ ಪ್ರಕಾರ, ಡಿಎ ಮೂಲ ವೇತನದ ಶೇಕಡಾ 50.26 ಕ್ಕೆ ಬರುತ್ತಿದೆ.
ಅಖಿಲ ಭಾರತ ಸಿಪಿಐ-ಐಡಬ್ಲ್ಯೂ ದತ್ತಾಂಶದ ಆಧಾರದ ಮೇಲೆ ಡಿಎ ಮತ್ತು ತುಟ್ಟಿಭತ್ಯೆ ಪರಿಹಾರ (DR) ಹೆಚ್ಚಳದ ಪ್ರಮಾಣವನ್ನ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಡಿಎನ್ನ ಸರ್ಕಾರಿ ನೌಕರರಿಗೆ ನೀಡಲಾಗುತ್ತದೆ ಮತ್ತು ಡಿಆರ್ ಪಿಂಚಣಿದಾರರಿಗೆ ನೀಡಲಾಗುತ್ತದೆ. ಅಂದ್ಹಾಗೆ, ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ – ಜನವರಿ ಮತ್ತು ಜುಲೈ ನಡುವೆ.
ಅಂದ್ಹಾಗೆ, ಅಕ್ಟೋಬರ್ 2023 ರಲ್ಲಿ ಕೊನೆಯ ಬಾರಿಗೆ ಡಿಎಯನ್ನ ಶೇಕಡಾ 4 ರಿಂದ 46ಕ್ಕೆ ಹೆಚ್ಚಿಸಲಾಯಿತು. ಪ್ರಸ್ತುತ ಹಣದುಬ್ಬರ ದರವನ್ನ ಗಮನಿಸಿದರೆ, ಮುಂದಿನ ಡಿಎ ಹೆಚ್ಚಳವು ಶೇಕಡಾ 4 ರಷ್ಟಿದೆ ಎಂದು ನಿರೀಕ್ಷಿಸಲಾಗಿದೆ.
BREAKING : ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆಗೆ ವಿರೋಧಿಸಿ ಅರ್ಜಿ : ‘ತೀರ್ಪು ಕಾಯ್ದಿರಿಸಿದ’ ಹೈಕೋರ್ಟ್
BREAKING: ‘ಪಾಕಿಸ್ತಾನ ನೂತನ ಪ್ರಧಾನಿ ಅಭ್ಯರ್ಥಿ’ಯಾಗಿ ‘ಒಮರ್ ಅಯೂಬ್’ ಆಯ್ಕೆ | Pakistan PM candidate
BREAKING : ವಿಪಕ್ಷಗಳ ‘ಇಂಡಿಯಾ ಮೈತ್ರಿಕೂಡ’ ತೊರೆದ ‘ಫಾರೂಕ್ ಅಬ್ದುಲ್ಲಾ’ : ‘NDA’ ಸೇರ್ಪಡೆ ಸಾಧ್ಯತೆ