ರಾಯಚೂರು : ಕಳೆದ ಕೆಲವು ದಿನಗಳ ಹಿಂದೆ ರಾಯಚೂರನ್ ನ ದೇವದುರ್ಗ ಪಟ್ಟಣದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಪುತ್ರ ಸಂತೋಷ್ ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದೇವದುರ್ಗ ಎಲ್ ಆ್ಯಂಡ್ ಓ ಹಾಗೂ ಟ್ರಾಫಿಕ್ ಠಾಣೆ ಎಲ್ಲಾ ಪೊಲೀಸ್ ಕಾನ್ಸ್ಟೇಬಲ್ಗಳು ಸಹಿ ಆಂದೋಲನ ಮಾಡುತ್ತಿದ್ದಾರೆ
ಈಗಾಗಲೇ ಘಟನೆಯ ಕುರಿತಂತೆ ಕಾನ್ಸ್ಟೇಬಲ್ ಹನುಮಂತರಾಯ ಶಾಸಕ ಕರೆಮ್ಮ ನಾಯಕ್ ಪುತ್ರ ಸಂತೋಷ ಹಾಗೂ ಪಿಎ ಇಲಿಯಾಸ ಸೇರಿದಂತೆ 8 ಜನರ ವಿರುದ್ಧ ದೂರು ಸಲ್ಲಿಸಿದ್ದಾರೆ.ಆದರೆ ಇದುವರೆಗೂ ಸಂತೋಷ್ ಹಾಗೂ ಉಳಿದ ಆರೋಪಿಗಳನ್ನು ಬಂಧಿಸಿಲ್ಲ ಎಂದು ಟ್ರಾಫಿಕ್ ಠಾಣೆ ಎಲ್ಲಾ ಪೊಲೀಸ್ ಕಾನ್ಸ್ಟೇಬಲ್ಗಳು ಸಹಿ ಆಂದೋಲನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ದೇವದುರ್ಗ ಎಲ್ ಆ್ಯಂಡ್ ಓ ಹಾಗೂ ಟ್ರಾಫಿಕ್ ಠಾಣೆ ಎಲ್ಲಾ ಪೊಲೀಸ್ ಕಾನ್ಸ್ಟೇಬಲ್ಗಳು ಸಹಿ ಆಂದೋಲನ ಮಾಡುತ್ತಿದ್ದಾರೆ. ಘಟನೆ ನಡೆದು ಹಲವು ದಿನಗಳೇ ಕಳೆದರೂ ರಾಜಕೀಯ ಒತ್ತಡಕ್ಕೆ ಶಾಸಕಿ ಪುತ್ರ ಸಂತೋಷ್ ಬಂಧಿಸದೇ ಇರೋದಕ್ಕೆ ಕಿಡಿಕಾರಿದ್ದಾರೆ. ಎಲ್ ಆ್ಯಂಡ್ ಓ ಠಾಣೆಯ 36 ಹಾಗೂ ಟ್ರಾಫಿಕ್ ಠಾಣೆಯ 23 ಪೊಲೀಸ್ ಕಾನ್ಸ್ಟೇಬಲ್ಗಳು ಸೇರಿ 59 ಸಿಬ್ಬಂದಿಯಿಂದ ಎಸ್ಪಿಗೆ ದೂರು ನೀಡಲಾಗಿದೆ.
BIG NEWS : ಫೆ.17ರಂದು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರಿಂದ ʻಬೆಂಗಳೂರು ಚಲೋʼ
ಘಟನೆ ಹಿನ್ನೆಲೆ?
ಕಾನ್ಸ್ಟೇಬಲ್ ಹನುಮಂತರಾಯ ಅವರು ಫೆ.11ರಂದು ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅನ್ನು ತಡೆದಿದ್ದರು. ಟ್ರ್ಯಾಕ್ಟರ್ ತಡೆಹಿಡಿದ ವಿಚಾರಕ್ಕೆ ಶಾಸಕಿ ಪುತ್ರ ಸಂತೋಷ್ ಕಾನ್ಸ್ಟೇಬಲ್ ಹನುಮಂತರಾಯ ಅವರಿಗೆ ಕರೆ ಮಾಡಿ ಟ್ರ್ಯಾಕ್ಟರ್ ಬಿಡುವಂತೆ ಹೇಳಿದ್ದಾರೆ. ಒತ್ತಡಕ್ಕೆ ಮಣಿಯದ ಕಾನ್ಸ್ಟೇಬಲ್ ಹನುಮಂತರಾಯ ಅವರು ಟ್ರ್ಯಾಕ್ಟರ್ ಅನ್ನು ಪೊಲೀಸ್ ಠಾಣೆಗೆ ತಂದು ಪರಿಶೀಲನೆ ನಡೆಸಿದ್ದಾರೆ.
ಇದರಿಂದ ಆಕ್ರೋಶಗೊಂಡ ಶಾಸಕಿ ಪುತ್ರ ಸಂತೋಷ್ ಕಾನ್ಸ್ಟೇಬಲ್ ಹನುಮಂತರಾಯ ಅವರನ್ನು ದೇವದುರ್ಗ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡು ಹಲ್ಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ಶಾಸಕಿ ಕರೆಮ್ಮ ನಾಯಕ್ ಪುತ್ರ ಸಂತೋಷ್ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎ1 ಸಂತೋಷ್, ಎ5 ಶಾಸಕಿ ಪಿಎ ಇಲಿಯಾಸ್ ಎಂದು ಉಲ್ಲೇಖಿಸಲಾಗಿದೆ.
ಚಿತ್ರದುರ್ಗ : ಹಣ ಡಬಲ್ ಆಗುತ್ತೆಂದು ಹೇಳಿ ಮೋಸ : ಆಂಧ್ರ ಮೂಲದ ವ್ಯಕ್ತಿಯಿಂದ 4.79ಕೋಟಿ ವಂಚನೆ
ಲೋಕಸಭಾ ಚುನಾವಣೆ ಮೇಲೆ ಸಿಎಂ ಸಿದ್ದರಾಮಯ್ಯ ಕಣ್ಣು : ಸರ್ಕಾರದ ಮುಂದಿರುವ ಸವಾಲುಗಳೇನು?