ಚಿತ್ರದುರ್ಗ : 60 ದಿನಗಳಲ್ಲಿ ಹಣ ಡಬಲ್ ಆಗುತ್ತದೆ ಎಂದು ಹೇಳಿ ಸುಮಾರು 4.79ಕೋಟಿ ರೂಪಾಯಿಗೂ ಅಧಿಕ ವಂಚನೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜುರು ಎಂಬಲ್ಲಿ ನಡೆದಿದೆ.
ರೈಲ್ವೆ ನೌಕರ ರಮೇಶ್ ಎಂಬವರಿಗೆ ಆಂಧ್ರ ಮೂಲದ ವ್ಯಕ್ತಿ ಸುಮಾರು ಒಂದು ಲಕ್ಷ ನಾಲ್ಕು ಸಾವಿರಕ್ಕೂ ಹೆಚ್ಚಿಗೆ ಹಣ ಪಡೆದುಕೊಂಡು ಡಬಲ್ ಮಾಡಿಕೊಡುತ್ತೇನೆ ಎಂದು ವಂಚಿಸಿದ್ದಾನೆ. ಕಳೆದ ವರ್ಷ ಡಿಸೆಂಬರ್ 15ರಂದು ಚಿಕ್ಕಜಾಜೂರು ಠಾಣೆಯಲ್ಲಿ ದಾಖಲಾದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.
ರೈಲ್ವೆ ನೌಕರ ರಮೇಶಪ್ಪ ಎನ್ನುವವರು , 1ಲಕ್ಷ 4 ಕೊಟ್ಟಿದ್ದಲ್ಲದೆ ಅವರ ಸಂಬಂಧಿಕರು ಸೇರಿದಂತೆ 106 ಜನರು ಸೇರಿದಂತೆ ಒಟ್ಟು 4.79 ಕೋಟಿ ಆಂಧ್ರ ಮೂಲದ ವ್ಯಕ್ತಿಯಿಂದ ವಂಚನೆಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಕ್ರೌಡ್ ಕ್ಲಬ್ ಇಂಟರ್ನ್ಯಾಷನಲ್ ಕಂಪನಿ ಹೆಸರಲ್ಲಿ ವಂಚನೆ ಎಸಗಿದ್ದಾನೆ 60 ದಿನದಲ್ಲಿ ಡಬಲ್ ಮಾಡಿ ಕೊಡುತ್ತೇನೆ ಎಂದು ಹೇಳಿ ವಂಚನೆ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ ಆಂಧ್ರ ಮೂಲದ ಕೋಡೆ ರಮಣಯ್ಯ ವಿರುದ್ಧ ಇದೀಗ ಕೇಸ್ ದಾಖಲಾಗಿದೆ ಚಿತ್ರದುರ್ಗದ ಸಿ ಎ ಎನ್ ಠಾಣೆಗೆ ಪ್ರಕರಣ ವರ್ಗಾವಣೆಯಾಗಿದೆ.