ಬೆಂಗಳೂರು: ಫೆಬ್ರವರಿ.16, 2024ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಅಂದು ಶಿಕ್ಷಕರು ಮತದಾನದಲ್ಲಿ ಪಾಲ್ಗೊಳ್ಳೋದಕ್ಕೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ, ರಾಜ್ಯ ಸರ್ಕಾರದಿಂದ ವಿಶೇಷ ಸಾಂದರ್ಭಿಕ ರಜೆಯನ್ನು ಘೋಷಣೆ ಮಾಡಿ ಆದೇಶಿಸಿದೆ.
ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ದಿನಾಂಕ:16.02.2024ರ ಶುಕ್ರವಾರದಂದು ಕರ್ನಾಟಕ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರಕ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಿಬಿಎಂಪಿ ಹಾಗೂ ರಾಮನಗರ ಜಿಲ್ಲೆ) ಉಪ ಚುನಾವಣೆಯನ್ನು ನಡೆಸಲು ಘೋಷಿಸಲಾಗಿರುತ್ತದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆಯುತ್ತಿರುವ ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತದ ಮತ ಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ನಿರ್ವಹಿಸುತ್ತಿರುವ ಅರ್ಹ ಶಿಕ್ಷಕ ಮತದಾರರು, ಮತದಾನ ಮಾಡಲು ಅನುಕೂಲವಾಗುವಂತ ದಿನಾಂಕ : 16.02.2024ರ ಶುಕ್ರವಾರದಂದು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಆದೇಶಿಸಿದ್ದಾರೆ.
ಈ ಉಪ ಚುನಾವಣೆಯ ಮತದಾನದಲ್ಲಿ ಭಾಗವಹಿಸಲು ಪೂರ್ವಾನುಮತಿಯನ್ನು ಪಡೆಯಬೇಕಾಗಿರುತ್ತದೆ. ಈ ಷರತ್ತಿಗೊಳಪಟ್ಟು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರಿವುಳ್ಳ ಅಧಿಕಾರಿಗಳು ಮಂಜೂರು ಮಾಡತಕ್ಕದ್ದು ಎಂದು ತಿಳಿಸಿದ್ದಾರೆ.
1056 ಖಾಲಿ ಹುದ್ದೆಗಳ ಭರ್ತಿಗೆ ‘UPSC’ ಅಧಿಸೂಚನೆ ಬಿಡುಗಡೆ : ಅರ್ಜಿ ಸಲ್ಲಿಕೆಗೆ ‘ಡೈರೆಕ್ಟ್ ಲಿಂಕ್’ ಇಲ್ಲಿದೆ
BREAKING : ಮದ್ಯ ನೀತಿ ಹಗರಣ : ದೆಹಲಿ ಸಿಎಂ ‘ಕೇಜ್ರಿವಾಲ್’ಗೆ 6ನೇ ಬಾರಿಗೆ ‘ED ಸಮನ್ಸ್’