ಕೆಎನ್ಎನ್ಡಿಜಿಟಲ್ ಡೆಸ್ಕ್ : ಯುಎಇ ಪ್ರಧಾನಿ ಮತ್ತು ಉಪಾಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಉಪಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ದುಬೈನಲ್ಲಿ ಗೋದಾಮು ಸೌಲಭ್ಯ ‘ಭಾರತ್ ಮಾರ್ಟ್’ ಗೆ ಚಾಲನೆ ನೀಡಿದರು. ಈ ಸೌಲಭ್ಯವು 2025ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಅಂದ್ಹಾಗೆ, ಭಾರತ್ ಮಾರ್ಟ್ ಪರಿಕಲ್ಪನೆಯನ್ನ ಇನ್ನೂ ಅಂತಿಮಗೊಳಿಸಲಾಗಿಲ್ಲ, ಇದು ಚೀನಾದ ‘ಡ್ರ್ಯಾಗನ್ ಮಾರ್ಟ್’ ಹೋಲುತ್ತದೆ ಎನ್ನಲಾಗ್ತಿದೆ.
ಭಾರತ್ ಮಾರ್ಟ್ ಎಂದರೇನು.?
ಭಾರತ್ ಮಾರ್ಟ್ ಗೋದಾಮು ಸೌಲಭ್ಯವಾಗಿದ್ದು, ರಫ್ತುದಾರರಿಗೆ ತಮ್ಮ ವೈವಿಧ್ಯಮಯ ಉತ್ಪನ್ನಗಳನ್ನ ಒಂದೇ ಸೂರಿನಡಿ ಪ್ರದರ್ಶಿಸಲು ಏಕೀಕೃತ ವೇದಿಕೆಯಾಗಲಿದೆ.
ಡಿಪಿ ವರ್ಲ್ಡ್ ಮ್ಯಾನೇಜ್ಡ್ ಜೆಬೆಲ್ ಅಲಿ ಫ್ರೀ ಝೋನ್ (JAFZA)ನಲ್ಲಿ ಸ್ಥಾಪಿಸಲಾಗುವ ಈ ಸೌಲಭ್ಯವು 1 ಲಕ್ಷ ಚದರ ಮೀಟರ್ ಪ್ರದೇಶದಲ್ಲಿ ಹರಡಲಿದೆ. ಇದು ಗೋದಾಮು, ಚಿಲ್ಲರೆ ಮತ್ತು ಆತಿಥ್ಯ ಘಟಕಗಳ ಮಿಶ್ರಣವನ್ನು ನೀಡುವ ವಿವಿಧೋದ್ದೇಶ ಸೌಲಭ್ಯವಾಗಿ ಕಾರ್ಯನಿರ್ವಹಿಸುತ್ತದೆ.
ಭಾರತ್ ಮಾರ್ಟ್ ಶೋರೂಂಗಳು, ಕಚೇರಿಗಳು, ಗೋದಾಮುಗಳು ಮತ್ತು ಭಾರಿ ಯಂತ್ರೋಪಕರಣಗಳಿಂದ ಹಾಳಾಗುವ ವಸ್ತುಗಳವರೆಗೆ ವಿವಿಧ ಸರಕುಗಳಿಗೆ ಬೆಂಬಲ ಸೌಲಭ್ಯಗಳನ್ನ ಹೊಂದಿರುತ್ತದೆ.
ಈ ವಿತರಣಾ ಸೌಲಭ್ಯವನ್ನ ಸ್ಥಾಪಿಸಿದ ನಂತರ, ಯುಎಇ ಬಳಿಯ ಆಮದುದಾರರು ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನ ಖರೀದಿಸಲು ಸೌಲಭ್ಯಕ್ಕೆ ಭೇಟಿ ನೀಡಬಹುದು.
1056 ಖಾಲಿ ಹುದ್ದೆಗಳ ಭರ್ತಿಗೆ ‘UPSC’ ಅಧಿಸೂಚನೆ ಬಿಡುಗಡೆ : ಅರ್ಜಿ ಸಲ್ಲಿಕೆಗೆ ‘ಡೈರೆಕ್ಟ್ ಲಿಂಕ್’ ಇಲ್ಲಿದೆ