ಬೆಂಗಳೂರು : 2024-25 ನೇ ಸಾಲಿನ ಬಜೆಟ್ ಮಂಡನೆಗೆ ರಾಜ್ಯ ಸರ್ಕಾರ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು 16 ರಂದು ಸಿಎಂ ಸಿದ್ದರಾಮಯ್ಯ ದಾಖಲೆಯ 15ನೆ ಬಜೆಟ್ ಮಂಡಿಸಲಿದ್ದಾರೆ..ಈ ಹೊತ್ತಲ್ಲೇ, ಸರ್ಕಾರದ ಮುಂದೆ ಬಿಬಿಎಂಪಿ ಬೃಹತ್ ಮೊತ್ತದ ಪ್ರಸ್ತಾವನೆ ಇಟ್ಟಿದೆ.
ಬಜೆಟ್ ಮೇಲೆ ಭಾರೀ ನಿರೀಕ್ಷೆ ಇಟ್ಟಿರೋ ಪಾಲಿಕೆ, ಇಂದಿರಾ ಕ್ಯಾಂಟೀನ್, ನಮ್ಮ ಕ್ಲಿನಿಕ್, ಟ್ರಾಫಿಕ್ ಕಂಟ್ರೋಲ್ ಸೇರಿ ಹಲವು ಸಮಸ್ಯೆಗಳನ್ನ ಮುಂದಿಟ್ಟುಕೊಂಡು 8 ಸಾವಿರದ 50 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ವಿವಿಧ ಕ್ಷೇತ್ರದ ಪ್ರಮುಖರ ಸಲಹೆ ಪಡೆದು ಬಜೆಟ್ ಮಂಡಿಸಲು ಸಜ್ಜಾಗ್ತಿದೆ. ಇತ್ತ ಬೆಂಗಳೂರಿನ ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಲು ಪ್ಲಾನ್ ಮಾಡಿಕೊಂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೀಗ ಸರ್ಕಾರದ ಮುಂದೆ 8050 ಕೋಟಿ ಬೃಹತ್ ಮೊತ್ತದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ.
ಟ್ರಾಫಿಕ್ ನಿವಾರಣೆಗೆ ಸುರಂಗಮಾರ್ಗವಾಗಿರಬಹುದು, ಇಂದಿರಾ ಕ್ಯಾಂಟೀನ್ ಗೆ ಬಾಕಿ ಬಿಲ್ ಪಾವತಿಸುವ ಪ್ರಸ್ತಾವನೆ ಇದ್ದು, ಘನತ್ಯಾಜ್ಯ ನಿರ್ವಹಣೆ, ರಾಜಕಾಲುವೆ ಬಫರ್ ವಲಯಗಳನ್ನ ಸುಗಮ ಸಂಚಾರಕ್ಕೆ ಬಳಸಲು ಪ್ಲಾನ್ ಹಾಕಿಕೊಂಡಿದ್ದು, ಪ್ರವಾಸಿತಾಣದ ಅಭಿವೃದ್ಧಿಗೆ ಸ್ಕೈಡೆಕ್ ಗೋಪುರ ನಿರ್ಮಾಣಕ್ಕೆ ಪ್ಲಾನ್ ಹಾಕಿಕೊಂಡಿದೆ. ಅಲ್ಲದೆ ಬಿಬಿಎಂಪಿ ಶಾಲಾ-ಕಾಲೇಜುಗಳ ಅಭಿವೃದ್ಧಿ ಕುರಿತು ಕೂಡ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.