ಬೆಂಗಳೂರು : ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಆಯೋಗ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ನಿಕ್ಷೇಪ ಪ್ರಾಜೆಕ್ಟ್ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಕಾಮಗಾರಿ ಮಾಡದೆ ಬಿಲ್ ಕೇಳಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಆದರೆ ವಿಚಾರಣೆಯನ್ನೆ ನಡೆಸಿದ ಬಿಲ್ ಬಾಕಿ ಇಟ್ಟರೆ ಹೇಗೆ ಎಂದು ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನಿಸಿದೆ.
ನ್ಯಾ.ನಾಗಮೋಹನದಾಸ ಪೀಠವು ವಿಚಾರಣೆ ನಡೆಸಿದ್ದು, ಆಯೋಗದಲ್ಲಿ ವಿಚಾರಣಾ ಪ್ರಕ್ರಿಯೆ ಆರಂಭವಾಗಿಲ್ಲ ಜನವರಿ ಮೂರರಂದು ಸಮಿತಿಗೆ 45 ಕಾಮಗಾರಿಗಳನ್ನು ದಾಖಲೆ ನೀಡಲಾಗಿದೆ. ಗುತ್ತಿಗೆಯ ಶೇಕಡ 75 ರಷ್ಟು ಹಣವನ್ನು ಗುತ್ತಿಗೆದಾರರಿಗೆ ನೀಡಲಾಗಿದೆ ಎಂದು ಹೈಕೋರ್ಟಿಗೆ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.ಸರ್ಕಾರದ ವಿಳಂಬ ನೀತಿಗೆ ನ್ಯಾ. ನಾಗಪ್ರಸನ್ನ ಅಸಮಧಾನ ಹೊರಹಾಕಿದ್ದಾರೆ.ಆಯೋಗದ ವಿಚಾರಣೆ ಪೂರ್ಣಗೊಳಿಸಲು 45 ಸಾಕಾಗುವುದಿಲ್ಲವೇ? ಫೆಬ್ರವರಿ 6 ರೊಳಗಾಗಿ ಆಯೋಗ ವಿಚಾರಣೆ ಪೂರ್ಣಗೊಳಿಸಬೇಕಿತ್ತು. ಆಯೋಗಕ್ಕೆ ದಾಖಲೆ ಒದಗಿಸಲು ಅಧಿಕಾರಿಗಳು ತಡ ಮಾಡಿದ್ದೆಕೆ? ಎಂದು ಪ್ರಶ್ನಿಸಿದೆ.
ಬಿಬಿಎಂಪಿ ಮುಖ್ಯ ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಕೆಲಸ ಮಾಡದ ಅಧಿಕಾರಿಗಳನ್ನು ಬದಲಾಯಿಸಿ.ಕಾಮಗಾರಿ ಮಾಡದೆ ಬಿಲ್ ಕೇಳಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ.ಆದರೆ ವಿಚಾರಣೆಯನ್ನೆ ನಡೆಸಿದ ಬಿಲ್ ಬಾಕಿ ಇಟ್ಟರೆ ಹೇಗೆ? ಎಂದು ಸರ್ಕಾರಕ್ಕೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.ಪ್ರತಿಕ್ರಿಯೆಗೆ ಸರ್ಕಾರ ಮಧ್ಯಾಹ್ನದವರೆಗೆ ಕಾಲಾವಕಾಶ ಕೋರಿದೆ ಇದೆ ವೇಳೆ ಮಧ್ಯಾನ ಒಂದು ಗಂಟೆಗೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತುರ್ತು ಸುದ್ದಿಗೋಷ್ಠಿಯನ್ನು ಕೂಡ ಕರೆದಿದ್ದಾರೆ ಎಂದು ತಿಳಿದು ಬಂದಿದೆ.