ಬೆಂಗಳೂರು : ಬೆಂಗಳೂರು ಉತ್ತರ ಕ್ಷೇತ್ರದ ಉಪಶಣಾವಣೆ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪರ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಬಹಿರಂಗವಾಗಿ ಪ್ರಚಾರ ಮಾಡಿದ್ದಾರೆ ಈ ಮೂಲಕ ಬಿಜೆಪಿಗೆ ಮತ್ತೆ ಮುಜುಗರ ಉಂಟು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಶಿಕ್ಷಕರ ಜೊತೆ ಸೋಮವಾರ ಸೋಮಶೇಖರ್ ಸಭೆ ನಡೆಸಿದ್ದರು. ಈ ವೇಳೆ ಪುಟ್ಟಣ್ಣಗೆ ಮತ ನೀಡುವಂತೆ ಪ್ರಚಾರ ಮಾಡಿದ್ದಾರೆ. ಸೋಮವಾರದಿಂದ ವಿಧಾನಸಭಾ ಅಧಿವೇಶನ ಆರಂಭವಾಗಿದ್ದು ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿ ಪುಟ್ಟಣ್ಣ ಪರ ಪತಯಾಚನೆ ಮಾಡಿದ್ದಕ್ಕೆ ಬಿಜೆಪಿ ನಾಯಕರು ಗರಂ ಆಗಿದ್ದಾರೆ
ಈ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಗುಣಗಾನವನ್ನು ಮಾಡಿದ್ದ ಎಸ್.ಟಿ.ಸೋಮಶೇಖರ್ ಪುಟ್ಟಣ್ಣ ಪರ ಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ ಸೇರುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇರಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ.
ಸೋಮಶೇಖರ್ ಅವರು ಬಿಜೆಪಿಗೆ ಮುಜುಗರ ಮಾಡುತ್ತಿರುವುದು ಇದು ಹೊಸದೆನಲ್ಲ. ಈ ಹಿಂದೆ ಗೃಹಲಕ್ಷ್ಮಿ ಯೋಜನೆ ಜಾರಿ ಸಂಬಂಧ ಕ್ಷೇತ್ರದ ಬೆಂಬಲಿಗರು, ಆಪ್ತರು ಹಾಗೂ ಕಾರ್ಯಕರ್ತರ ಸಭೆಯನ್ನು ಸೋಮಶೇಖರ್ ಕರೆದಿದ್ದರು. ಇದೀಗ ಪುಟ್ಟಣ್ಣಪ್ಪರ ಪ್ರಚಾರ ಮಾಡಿದಕ್ಕಾಗಿ ಬಿಜೆಪಿ ನಾಯಕರು ಎಸ್ ಟಿ ಸೋಮಶೇಖರ್ ವಿರುದ್ಧ ಸಿಟ್ಟಾಗಿದ್ದಾರೆ ಎಂದು ಹೇಳಲಾಗುತ್ತಿದೆ.