ಬೆಂಗಳೂರು : ಯೂಟ್ಯೂಬ್ ನೋಡಿ ಕಳ್ಳತನ ಮಾಡುತ್ತಿದ್ದ ಖದೀಮ ಇದೀಗ ಪೋಲೀಸರ ಅಥಿತಿಯಾಗಿದ್ದಾನೆ.ಬೆಂಗಳೂರಿನ ಮೈಕೋ ಲೇಔಟ್ ವ್ಯಾಪ್ತಿಯಲ್ಲಿ ಸುನೀಲ್ ಅಲಿಯಾಸ್ ತಮಟೆ ಎನ್ನುವ ಖತರ್ನಾಕ್ ಕಳ್ಳನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.ಅಲ್ಲದೆ ಈ ಖದಿಮ ಪೊಲೀಸರೊಂದಿಗೆ ಸ್ನೇಹ ಬೆಳೆಸಿ ಕಳ್ಳತನ ಮಾಡುತ್ತಿದ್ದ ಎಂದು ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಕದ್ದ ಬಳಿಕ ಸಾಕ್ಷಿ ನಾಶ ಮಾಡುವುದನ್ನು ಈ ಕಿಲಾಡಿ ಕಳ್ಳ ಕಲಿತಿದ್ದ ಎನ್ನಲಾಗುತ್ತಿದ್ದು, ಸುನಿಲ್ ಅಲಿಯಾಸ್ ತಮಟೆ ಬಂಧಿತ ಆರೋಪಿಯಾಗಿದ್ದಾನೆ. ಚೆನ್ನಾಭರಣವನ್ನು ಕದ್ದು ಸಾಕ್ಷಿ ನಾಶ ಮಾಡಿ ಪರಾರಿ ಆಗುತ್ತಿದ್ದ ಎಂದು ಹೇಳಲಾಗುತ್ತಿದ್ದು, ಕೈಗೆ ಧರಿಸಿದ್ದ ಪೊಲೀಸರಿಗೆ ಯಾವುದೇ ರೀತಿಯಾಗಿ ಸುಳಿವು ಬಿಟ್ಟುಕೊಡುತ್ತಿರಲಿಲ್ಲ.
ಅಲ್ಲದೆ ಈತ ಪೊಲೀಸ್ ಠಾಣೆಯ ಎದುರೇ ಮನೆಯನ್ನು ಪಡೆದುಕೊಂಡು ವಾಸಿಸುತ್ತಿದ್ದ ಪೊಲೀಸ್ ಸಿಬ್ಬಂದಿಗಳೊಂದಿಗೆ ಸ್ನೇಹ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಪೊಲೀಸರಿಗೆ ಆಘಾತವಾಗಿದ್ದು ಈತ ಕಳ್ಳತನ ಮಾಡಿದ್ದಾನಾ ಎಂದು ಶಾಕ್ ಆಗಿದ್ದಾರೆ ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಹಲವಾರು ಮನೆಗಳಲ್ಲಿ ಹಣ ಚಿನ್ನಾಭರಣವನ್ನು ಈ ಕಳ್ಳ ಕದ್ದಿದ್ದ ಎಂದು ಹೇಳಲಾಗುತ್ತಿದೆ ಇದೀಗ ಸುನಿಲನ್ನು ಪೊಲೀಸರು ವಶಕ್ಕೆ ಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪ್ರಕರಣದ ಕುರಿತಂತೆ ಕದ್ದಿದ್ದ ಚಿನ್ನಾಭರಣ ಹಾಗೂ ಹಣವನ್ನು ಮಾಲೀಕರಿಗೆ ತಲುಪಿಸುವಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.