ಕಲಬುರಗಿ: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೆಚ್ಚದ ಬೋರ್ಡ್ ಪ್ರದರ್ಶನ ಕಡ್ಡಾಯವಾಗಿ ಹಾಕಾಬೇಕಾಗಿದೆ ಅಂಥ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣ್ ಪ್ರಕಾಶ್ ಪಾಟೀಲ್ ನೀಡಿದ್ದಾರೆ.
ಅವರು ನಗರದಲ್ಲಿ ಶನಿವಾರ ಜಿಮ್ಸ್ ಆವರಣದಲ್ಲಿ ನಿರ್ಮಾಣಗೊಂಡಿರುವ ಟ್ರಾಮಾ ಕೇರ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದೇ ವೇಳೇ ಅವರು ಮಾತನಾಡಿ, ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳು ನೀಡುವ ಚಿಕಿತ್ಸೆ ವೆಚ್ಚದ ಬೋರ್ಡ್‌ಗಳನ್ನು ಕಡ್ಡಾಯವಾಗಿ ಆಸ್ಪತ್ರೆಗಳಲ್ಲಿ ಪ್ರದರ್ಶಿಸಬೇಕು. ಆ ಮೂಲಕ ನಡೆಯುತ್ತಿರುವ ಸುಲಿಗೆ ತಪ್ಪಿಸಬೇಕು ಅಂತ ಹೇಳಿದರು. ಇನ್ನೂ ಯಾವ-ಯಾವ ಸೇವೆಗಳಿಗೆ ಎಷ್ಟು ಹಣವನ್ನು ಪಡೆಯಲಾಗುತ್ತದೆ ಎನ್ನುವ ವಿವರಗಳನ್ನು ರೋಗಿ ಮತ್ತು ರೋಗಿಯ ಸಂಬಂಧಿಕರಿಗೆ ಮೊದಲು ತಿಳಿಸಬೇಕು ಅಂತ ಹೇಳಿದರು.