ಶಿವಮೊಗ್ಗ : ರಾಷ್ಟ್ರದ್ರೋಹಿಗಳನ್ನು ಹಾಗೂ ದೇಶ ವಿಭಜನೆ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕೆಂದು ಮಾಜಿ ಶಿವಾಜಿಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿರುವ ಬೆನ್ನಲ್ಲೇ ಇಂದು ಮತ್ತೆ ಅವರು ತಾವು ನೀಡಿರುವ ಹೇಳಿಕೆ ಪುನರುಚ್ಚಿಸಿದ್ದು, ಈ ರೀತಿ ಕಾನೂನು ತರುವ ಕುರಿತು ಕೇಂದ್ರದ ನಾಯಕರಿಗೆ ಪತ್ರ ಬರೆಯುತ್ತೇನೆ ಎಂದು ಗುಡುಗಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ನವರಿಗೆ ದೇಶದ ರಾಷ್ಟ್ರಪತಿಗಳ ಬಗ್ಗೆಯೂ ಗೌರವ ಇಲ್ಲ. ಮುಖ್ಯಮಂತ್ರಿಗಳು ತಮ್ಮ ಭಾಷೆಯನ್ನು ಸ್ವಲ್ಪ ಸುಧಾರಿಸಿಕೊಳ್ಳಬೇಕು. ಕಾನೂನು ತರುವ ಕುರಿತು ಕೇಂದ್ರದ ನಾಯಕರಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ತಿಹಾರ್ ಜೈಲಿನಿಂದ ಬಂದಿರುವವರು ಇಂದು ಉಪ ಮುಖ್ಯಮಂತ್ರಿ ಆಗಿದ್ದಾರೆ. ಹತ್ತು ಸಾವಿರ ರೂ ದಂಡ ಕಟ್ಟಿರುವವರು ಮುಖ್ಯಮಂತ್ರಿ ಆಗಿದ್ದಾರೆ. ದೇಹದ್ರೋಹಿ ರಕ್ಷಣೆ ಕೊಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ನಾನು ಇಲ್ಲಿಯವರೆಗೆ ಒಂದು ಬಾರಿಯೂ ದಂಡ ಕಟ್ಟಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ರೀತಿ ನಾನು ಜೈಲಿಗೆ ಹೋಗಿ ಬಂದಿಲ್ಲ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಸುಳ್ಳು ಹೇಳುವುದರಲ್ಲಿ ಸಿಎಂ ಸಿದ್ದರಾಮಯ್ಯ ನಿಸ್ಸೀಮ. ಆರ್ಎಸ್ಎಸ್ ಬಗ್ಗೆ ನೀಡಿದ ಹೇಳಿಕೆ ಸಿಎಂ ವಾಪಸ್ ಪಡೆಯಲಿ. ಸಿದ್ದರಾಮಯ್ಯನವರೇ ನೀವು ಮೊದಲು ಶ್ವೇತಪತ್ರ ಹೊರಡಿಸಿ. ರಾಜಕೀಯ ನಿವೃತ್ತಿ ತಗೆದುಕೊಳ್ಳುತ್ತೇನೆ ಇಂತಹ ಹೇಳಿಕೆ ಬೇಡ. ಮೊದಲು ಶ್ವೇತಪತ್ರ ಹೊರಡಿಸಿ. ರಾಜ್ಯ ಸರ್ಕಾರ ದಿವಾಳಿ ಆಗಿ ಹೋಗಿದೆ. ರಾಷ್ಟ್ರಭಕ್ತರನ್ನ ಕಂಡರೇ ಕಾಂಗ್ರೆಸ್ ನವರಿಗೆ ಅಲರ್ಜಿ ಎಂದು ಕಿಡಿ ಕಾರಿದರು.