ನವದೆಹಲಿ: ರೆಪೊ ದರವನ್ನು ಶೇ.6.5ರಲ್ಲೇ ಉಳಿಸಿಕೊಳ್ಳಲು ಎಂಪಿಸಿ ನಿರ್ಧಾರ ಮಾಡಲಾಗಿದೆ ಅಂತ ಶಕ್ತಿಕಾಂತ ದಾಸ್ ಅವರು ತಿಳಿಸಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿಯು ಮುಂಬೈನಲ್ಲಿ ಮಂಗಳವಾರ ಪ್ರಾರಂಭವಾದ ಮೂರು ದಿನಗಳ ಸಭೆಯ ನಂತರ ಫೆಬ್ರವರಿ 8 ರಂದು ರೆಪೊ ದರಗಳ ಬಗ್ಗೆ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಇಂದು ಬೆಳಿಗ್ಗೆ 10 ಗಂಟೆಗೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಎಂಪಿಸಿ ನಿರ್ಧಾರವನ್ನು ಪ್ರಕಟ ಮಾಡಿದ್ದಾರೆ.
ಅಂದ ಹಾಗೇ ಆರ್ಬಿಐ ಎಂಪಿಸಿ ಡಿಸೆಂಬರ್ 2023 ರವರೆಗೆ ಸತತ ಐದು ಬಾರಿ ರೆಪೊ ದರವನ್ನು ಶೇಕಡಾ 6.5 ಕ್ಕೆ ಉಳಿಸಿಕೊಂಡಿದೆ. ಬೆಂಚ್ಮಾರ್ಕ್ ಬಡ್ಡಿದರವನ್ನು ಕೊನೆಯ ಬಾರಿಗೆ ಫೆಬ್ರವರಿ 2023 ರಲ್ಲಿ ಹೆಚ್ಚಿಸಲಾಯಿತು, ನಂತರ ಅದನ್ನು ಶೇಕಡಾ 6.25 ರಿಂದ ಪ್ರಸ್ತುತ 6.5 ಕ್ಕೆ ಹೆಚ್ಚಿಸಲಾಯಿತು. ಇದಕ್ಕೂ ಮೊದಲು, ಮೇ 2022 ರಿಂದ ಫೆಬ್ರವರಿ 2023 ರವರೆಗೆ ರೆಪೊ ದರವನ್ನು 250 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಲಾಗಿದೆ.
ಡಿಸೆಂಬರ್ 8 ರಂದು ನಡೆದ ತನ್ನ ಕೊನೆಯ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ, ಕೇಂದ್ರ ಬ್ಯಾಂಕ್ ಸತತ ಐದನೇ ಬಾರಿಗೆ ರೆಪೊ ದರವನ್ನು ಯಥಾಸ್ಥಿತಿಯಲ್ಲಿರಿಸಿತ್ತು. ಗವರ್ನರ್ ಶಕ್ತಿಕಾಂತ ದಾಸ್ ಅವರು ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಳವಣಿಗೆಯ ಮುನ್ಸೂಚನೆಯನ್ನು ಹಿಂದಿನ ಶೇಕಡಾ 6.5 ರಿಂದ ಶೇಕಡಾ 7 ಕ್ಕೆ ಹೆಚ್ಚಿಸಿದ್ದರು.
RBI MPC opts for status quo, keeps repo rate unchanged at 6.5%, maintains monetary policy stance as ‘withdrawal of accommodation’ pic.twitter.com/x3JEXhAqC9
— ANI (@ANI) February 8, 2024