ಮೈಸೂರು: ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಿಗೆ ನವೆಂಬರ್ ತಿಂಗಳಿಂದ ಉಚಿತವಾಗಿ ವಿದ್ಯುತ್ ಹಾಗೂ ನೀರನ್ನು ಪೂರೈಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಅವರು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿನೀಡಿದರು. ಇದೇ ವೇಳೆ ಅವರು ಮಾತನಾಡುತ್ತ, ರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಹಾಗೂ ನೀರು ನೀಡಿದರೆ, ವಿದ್ಯಾರ್ಥಿಗಳಿಗೆ, ಶಿಕ್ಷಕರುಗಳಿಗೆ ಅನುಕೂಲವಾಗ ಲಿದೆ. ಎಷ್ಟೋ ಶಾಲೆಗಳು ವಿದ್ಯುತ್ ಬಿಲ್ಗೆ ಹೆದರುವ ಅಗತ್ಯವಿಲ್ಲ ಅಂತ ಹೇಳಿದರು .
ಇನ್ನೂ ಶಾಲಾ ಮಕ್ಕಳಿಗೆ ಇನ್ನು ಮುಂದೆ ಎರಡು ಮೊಟ್ಟೆ ನೀಡಲಾಗುವದು, ಕ್ಷೀರ ಭಾಗ್ಯ ಪಾಲಿನಲ್ಲಿ ರಾಜ್ಯ ಮಾಲ್ಟ್ ಕೊಡುತ್ತೇವೆ. ಕ್ಷೀರ ಭಾಗ್ಯ ಪಾಲಿನಲ್ಲಿ ರಾಗಿ ಮಾಲ್ಟ್ ಹಾಕಿ, ಮೈಸೂರಿನ ಸಿಎಫ್ ಟಿಆರ್ಐನಲ್ಲಿ ಟೆಸ್ಟ್ ಮಾಡಿಸುತ್ತಿದ್ದೇವೆ. ಮಕ್ಕಳ ಪೌಷ್ಟಿಕಾಂಶ ಜಾಸ್ತಿ ಮಾಡಲು ಪ್ರಯತ್ನಿಸುತ್ತಿದ್ದೇವೆ ಅಂತ ಹೇಳಿದರು.