ನವದೆಹಲಿ: 10 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಆರ್ಥಿಕತೆಯು ಹೇಗೆ ಕಾರ್ಯನಿರ್ವಹಿಸಿದೆ ಎಂಬುದರ ಕುರಿತು ಶ್ವೇತಪತ್ರವನ್ನು ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗುತ್ತಿದೆ.
ಯುಪಿಎ ಸರ್ಕಾರದ ಆರ್ಥಿಕ ದುರಾಡಳಿತದ ಬಗ್ಗೆ ಕೇಂದ್ರವು ಶ್ವೇತಪತ್ರವನ್ನ ಹೊರತರಲು ಸಂಸತ್ತಿನ ಬಜೆಟ್ ಅಧಿವೇಶನವನ್ನ ಫೆಬ್ರವರಿ 10 ರವರೆಗೆ ಒಂದು ದಿನ ವಿಸ್ತರಿಸಲಾಗಿದೆ ಎಂದು ಹಲವಾರು ಮಾಧ್ಯಮ ವರದಿಗಳು ಮಂಗಳವಾರ ತಿಳಿಸಿವೆ.
“ಯುಪಿಎ ಸರ್ಕಾರದ ಅವಧಿಯಲ್ಲಿನ ಆರ್ಥಿಕ ದುರಾಡಳಿತದ ಬಗ್ಗೆ ಶ್ವೇತಪತ್ರವು ಭಾರತದ ಆರ್ಥಿಕ ದುಃಸ್ಥಿತಿಯನ್ನು ವಿವರಿಸುತ್ತದೆ. ಆ ಸಮಯದಲ್ಲಿ ತೆಗೆದುಕೊಳ್ಳಬಹುದಾದ ಸಕಾರಾತ್ಮಕ ಕ್ರಮಗಳ ಪರಿಣಾಮದ ಬಗ್ಗೆಯೂ ಇದು ಮಾತನಾಡುತ್ತದೆ” ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
BREAKING : ಯುಪಿಎ ಸರ್ಕಾರದ ಆರ್ಥಿಕ ದುರಾಡಳಿತದ ಕುರಿತು ಕೇಂದ್ರದಿಂದ ಸಂಸತ್ತಿನಲ್ಲಿ ‘ಶ್ವೇತಪತ್ರ’ ಮಂಡನೆ