ಡೆಹಲಿ : ದೆಹಲಿಯಲ್ಲಿ ಲಷ್ಕರ್ ಈ ತೊಯ್ಬಾ ಉಗ್ರಣ ಬಂಧನವಾಗಿದ್ದು, ಉಗ್ರನನ್ನು ದೆಹಲಿ ವಿಶೇಷ ಪೊಲೀಸ್ ದಳ ಬಂಧಿಸಿದೆ ಎಂದು ತಿಳಿದುಬಂದಿದೆ.ಭದ್ರತಾ ಪಡೆಯಲ್ಲಿ ಕೆಲಸ ಮಾಡಿ ಬಂದಿತ ಉಗ್ರ ನಿವೃತ್ತನಾಗಿದ್ದ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದಲ್ಲಿ ಎಲ್ಇಟಿ ಸಂಘಟನೆಯಲ್ಲಿ ಉಗ್ರ ತರಬೇತಿ ಪಡೆದಿದ್ದ, ಜಮ್ಮು ಕಾಶ್ಮೀರದ ಕುಪ್ಪು ವಾರದಲ್ಲಿ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಬಂಧಿತ ಉಗ್ರನನ್ನು ಇದೀಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಉಡುಪಿಯಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಆಕ್ಟಿವ್?
ಉಡುಪಿ ಜಿಲ್ಲೆಯಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಆಕ್ಟಿವ್ ಆಗಿದೆ ಎಂದು ಹೇಳಲಾಗುತ್ತಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ನಕ್ಸಲರ ಓಡಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮುಧೂರು, ಜಡ್ಕಲ್ ಬೆಳಕಲ್. ಬಳಿ ನಕಸಲು ಓಡಾಟ ನಡೆಸಿದ್ದಾರೆ.
ಅಲ್ಲಿನ ಹಲವು ಮನೆಗಳಿಗೆ ನಕ್ಸಲರ ತಂಡ ಭೇಟಿ ನೀಡಿದೆ ಎಂದು ಹೇಳಲಾಗುತ್ತಿದೆ ಈ ಕುರಿತಂತೆ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಪಶ್ಚಿಮಘಟ್ಟದ ತಪ್ಪಿಲಿನಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಆರಂಭವಾಗಿದೆ ಎಂದು ತಿಳಿದು ಬಂದಿದೆ