ಕೊಪ್ಪಳ : ಹಾಸ್ಟೆಲ್ ನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ವಿರುದ್ಧ ರ್‍ಯಾಗಿಂಗ್ ಆರೋಪ ಕೇಳಿಬಂದಿದ್ದು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳ ಮೇಲೆ ರ್‍ಯಾಗಿಂಗ್ ನಡೆಸಲಾಗುತ್ತಿದೆ. 10ನೆ ತರಗತಿಯ ವಿದ್ಯಾರ್ಥಿಗಳು 6,7,8, ಮತ್ತು 9 ನೆ ತರಗತಿಯ ವಿದ್ಯಾರ್ಥಿಗಳಿಗೆ ಕೋಣೆ ಸ್ವಚ್ಛಗೊಳಿಸುವುದು, ಬಸ್ಕಿ ಹೊಡೆಸುವುದು, ಪ್ರಾಜೆಕ್ಟ್ ಕೆಲಸ ಮಾಡಿಸಿ ಕಿರಿಯ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ರ್‍ಯಾಗಿಂಗ್ ಮಾಡುತ್ತಿದ್ದಾರೆ.
ಆರು ಏಳು ಎಂಟು ಒಂಬತ್ತು ನೇ ತರಗತಿ ವಿದ್ಯಾರ್ಥಿಗಳಿಗೆ 10ನೇ ತರಗತಿಯ ವಿದ್ಯಾರ್ಥಿಗಳು ರ್‍ಯಾಗಿಂಗ್ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಹತ್ತನೇ ತರಗತಿಯ ಐದರಿಂದ ಆರು ವಿದ್ಯಾರ್ಥಿಗಳ ವಿರುದ್ಧ ರ್‍ಯಾಗಿಂಗ್ ಆರೋಪ ಕೇಳಿ ಬಂದಿದ್ದು ಕಳೆದ ನಾಲ್ಕು ಐದು ತಿಂಗಳಿನಿಂದ ಈ ರ್‍ಯಾಗಿಂಗ್ ನಡೆಯುತ್ತಿದೆ.
ವಸತಿ ಶಾಲೆಯಲ್ಲಿ ಒಟ್ಟು 246 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ರ್‍ಯಾಗಿಂಗ್ ಬಗ್ಗೆ ಹಲವು ಮಕ್ಕಳು ಈಗಾಗಲೇ ಪೋಷಕರು ಹಾಗೂ ಶಿಕ್ಷಕರಿಗೆ ದೂರು ನೀಡಿದ್ದಾರೆ.ವಸತಿ ನಿಲಯಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ನಿರ್ಲಕ್ಷ ವಹಿಸಿದ್ದು ಆರೋಪ ಕೇಳಿ ಬಂದಿದೆ.