ಬೆಂಗಳೂರು : ಭಾರತೀಯ ಹಾಕಿ ತಂಡದ ಡಿಫೆಂಡರ್ ವರುಣ್ ಕುಮಾರ್ ವಿರುದ್ಧ FIR ದಾಖಲಾಗಿದ್ದು, ಮದುವೆ ಆಗುವುದಾಗಿ ಹೇಳಿ ನಂಬಿಸಿ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ ಈ ಹಿನ್ನೆಲೆಯಲ್ಲಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಯುವತಿ 17 ವರ್ಷ ಆಗಿದ್ದಾಗಲೇ ಅರುಣ್ ಕುಮಾರ್, ಪ್ರೀತಿ ಮಾಡಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿದ್ದ ಎಮ್ನಲಾಗುತ್ತಿದೆ. ಕಳೆದ 2019 ರಂದು 5 ವರ್ಷ ಬಲವಂತವಾಗಿ ಯುವತಿಯನ್ನು ವರುಣ್ ಕುಮಾರ್ ಲೈಂಗಿಕವಾಗಿ ಬಳಸಿ ಕೊಂಡಿಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಘಟನೆ ಕುರಿತಂತೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಕಳೆದ 2019 ರಿಂದ 5 ವರ್ಷಗಳ ವರೆಗೆ ಸತತವಾಗಿ ಯುವತಿಯನ್ನು ದೈಹಿಕ ಸಂಪರ್ಕ ಬೆಳೆಸಿ ಲೈಂಗಿಕವಾಗಿ ಬಳಸಿಕೊಂಡು ಮದುವೆಯಾಗುತ್ತೇನೆ ಎಂದು ನಂಬಿಸಿ ಇದೀಗ ಮೋಸ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಇತ್ತೀಚಿಗೆ ಈ ಕುರಿತಾಗಿ ಪೊಲೀಸರು ಆತನನ್ನು ಕರೆಯಿಸಿ ಇಬ್ಬರ ಸಂಧಾನ ಮಾಡಿಸುವ ಕೆಲಸ ಮಾಡಿದರು. ಆದರೂ ಕೂಡ ವರುಣ್ ಕುಮಾರ್ ಅದೇ ರೀತಿ ಮುಂದುವರೆದಿದ್ದು ಮದುವೆಯಾಗು ಎಂದು ಯುವತಿ ಹೇಳಿದಾಗ ಇದೀಗ ನಿರಾಕರಿಸಿದ್ದಾನೆ. ಈ ಹಿನೆಲೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ.