ನವದೆಹಲಿ: ತಮ್ಮ ಪಕ್ಷಕ್ಕೆ ಸೇರಲು ಬಿಜೆಪಿಯಿಂದ ಒತ್ತಡದ ಹೇರುತ್ತಿದ್ದು, ನಾವು “ತಲೆಬಾಗುವುದಿಲ್ಲ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ. ಶಾಲೆಗಳನ್ನು ನಿರ್ಮಿಸುವುದು ಮತ್ತು ಜನರಿಗೆ ಉಚಿತ ಚಿಕಿತ್ಸೆ ನೀಡುವುದು ಮುಂತಾದ ದೆಹಲಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಅವರನ್ನ ಜೈಲಿಗೆ ಕಳುಹಿಸಿದರೂ ನಿಲ್ಲುವುದಿಲ್ಲ ಎಂದು ಅವರು ಹೇಳಿದರು. ನವದೆಹಲಿಯ ಕಿರಾರಿಯಲ್ಲಿ ಎರಡು ಶಾಲಾ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಸಂದರ್ಭದಲ್ಲಿ ಸಿಎಂ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ.
“ನಾವು ಅವರ ಪಕ್ಷಕ್ಕೆ ಸೇರಬೇಕೆಂದು ಬಿಜೆಪಿ ಬಯಸುತ್ತದೆ ಆದರೆ ನಾವು ತಲೆಬಾಗುವುದಿಲ್ಲ” ಎಂದು ಕೇಜ್ರಿವಾಲ್ ಹೇಳಿದರು. “ಶಾಲೆಗಳನ್ನ ನಿರ್ಮಿಸಿದ್ದಕ್ಕಾಗಿ ಮನೀಶ್ ಸಿಸೋಡಿಯಾ ಅವರನ್ನು ಜೈಲಿಗೆ ಹಾಕಲಾಯಿತು. ಮೊಹಲ್ಲಾ ಕ್ಲಿನಿಕ್ಗಳನ್ನ ನಿರ್ಮಿಸಿದ ಕಾರಣ ಸತ್ಯೇಂದರ್ ಜೈನ್ ಅವರನ್ನ ಜೈಲಿಗೆ ಕಳುಹಿಸಲಾಯಿತು” ಎಂದು ಅವರು ಹೇಳಿದರು. ಎಎಪಿ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯ (ED) ಮತ್ತು ಕೇಂದ್ರ ತನಿಖಾ ದಳ (CBI) ಸೇರಿದಂತೆ ವಿವಿಧ ಕೇಂದ್ರ ಸಂಸ್ಥೆಗಳನ್ನು ನಿಯೋಜಿಸಲಾಗಿದೆ ಎಂದು ಕೇಜ್ರಿವಾಲ್ ಗಮನಸೆಳೆದರು.
‘ಸಾರ್ವಜನಿಕ ಆಸ್ತಿ’ ಹಾನಿ ಮಾಡುವವರ ವಿರುದ್ಧ ಖಡಕ್ ಕ್ರಮ : ನಷ್ಟ ಸರಿದೂಗಿಸಿದ ನಂತ್ರವೇ ‘ಜಾಮೀನು’
BIGG NEWS : ಪಾಕ್ ಪರ ಬೇಹುಗಾರಿಕೆ : ಮಾಸ್ಕೋದಲ್ಲಿರುವ ‘ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ’ ಅರೆಸ್ಟ್
‘ಸಾರ್ವಜನಿಕ ಆಸ್ತಿ’ ಹಾನಿ ಮಾಡುವವರ ವಿರುದ್ಧ ಖಡಕ್ ಕ್ರಮ : ನಷ್ಟ ಸರಿದೂಗಿಸಿದ ನಂತ್ರವೇ ‘ಜಾಮೀನು’