ಹುಬ್ಬಳ್ಳಿ : ಸ್ನೇಹಿತನ ಹೆಂಡತಿಗೆ ವ್ಯಕ್ತಿಯೊಬ್ಬ ಮೊಬೈಲ್ ಅಲ್ಲಿ ಕರೆ ಮಾಡೋದು ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ಎಂಬ ಕಾರಣಕ್ಕೆ ಅಜರ್ ಎನ್ನುವ ವ್ಯಕ್ತಿ ಆತನ ಸ್ನೇಹಿತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಸುಟ್ಟು ಕೊಂದಿರುವ ಘಟನೆ ನಡೆದಿದೆ.
ಮಾರುತಿನಗರದ ವಿಜಯ ಬಸವ (24) ಎಂಬಾತನ ಶವ ಎರಡು ದಿನದ ಹಿಂದೆ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈತ ಖಾಸಗಿ ಮೊಬೈಲ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಮಂಟೂರ ರಸ್ತೆಯ ಆರೋಪಿ ಅಜರ್ ಎಂಬಾತ ಕೊಲೆ ಮಾಡಿದ್ದ ವಿಜಯ ಮತ್ತು ಅಜರ್ ಅತ್ಮೀಯ ಸ್ನೇಹಿತರು, ಅಜರ್ನ ಪತ್ನಿಗೆ ವಿಜಯ ಮೇಸೆಜ್ ಹಾಗೂ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದನಂತೆ.
ಈ ಬಗ್ಗೆ ಅಜರ್ನಿಗೆ ಪತ್ನಿ ತಿಳಿಸಿದ್ದಾಳೆ. ಅಜರ್ ಒಂದೆರಡು ಬಾರಿ ವಿಜಯಗೆ ಬುದ್ಧಿವಾದ ಹೇಳಿದ್ದಾನೆ. ಆದರೂ ಆತ ಕೇಳಿರಲಿಲ್ಲ. ತನ್ನ ಚಾಳಿಯನ್ನು ಮುಂದುವರಿಸಿದ್ದನಂತೆ. ಹೀಗಾಗಿ. ಈತನಿಗೆ ಪಾಠ ಕಲಿಸಬೇಕೆಂದು ಪಾಳುಬಿದ್ದ ಜಾಗೆಯಲ್ಲಿ ಕರೆಸಿದ್ದಾನೆ. ಆತನೊಂದಿಗೆ ಕುಡಿದಿದ್ದಾನೆ. ಈ ವೇಳೆ ಮತ್ತೊಮ್ಮೆ ಬುದ್ದಿವಾದ ಹೇಳಿದ್ದಾನೆ. ಆಗ ಮಾತಿಗೆ ಮಾತು ಬೆಳೆದುಜಗಳಶುರುವಾಗಿದೆ. ಈ ವೇಳೆ ವಿಜಯನ ಮೇಲೆ ಆಜರ್ ಕಲ್ಲು ಎತ್ತಿಹಾಕಿದ್ದಾನೆ. ಆಗ ಪ್ರಜ್ಞೆ ತಪ್ಪಿದ್ದಾನೆ. ಕೂಡಲೇ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಅಲ್ಲಿಂದ ಪರಾರಿಯಾಗಿದ್ದ.
ಮರುದಿನ ಬೆಳಗ್ಗೆ ಕೊಲೆಯಾದ ಬಗ್ಗೆ ಮಾಹಿತಿ ತಿಳಿದು ಪೊಲೀಸ್ ಕಮಿಷನರೇಟ್, ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿತ್ತು. ಈ ತಂಡ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕ್ಯಾಮರಾ ದೃಶ್ಯಾವಳಿ, ಮೊಬೈಲ್ ಕರೆಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.