ತುಮಕೂರು : ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊಸೂರಿನಲ್ಲಿ ಮೂವರು ಮಕ್ಕಳೊಂದಿಗೆ ತಾಯಿ ನಾಪತ್ತೆಯಾಗಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊಸೂರು ಗ್ರಾಮದ ನಿವಾಸಿಗಳೆಂದು ಹೇಳಲಾಗುತ್ತಿದು, ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ತಾಯಿ ಮಕ್ಕಳು ಇದೀಗ ಪತ್ತೆಯಾಗಿದ್ದಾರೆ. ಮಾನಸಿಕ ಗೊಂದಲಗಳಿಂದ ಮಕ್ಕಳನ್ನು ತಾಯಿ ಕರೆದುಕೊಂಡು ಹೋಗಿದ್ದಳು ಎಂಬ ಮಾಹಿತಿ ಇದೆ.
ಅತ್ತೆ ನೀಡಿದ ದೂರಿನ ಮೇರೆಗೆ ಕುಣಿಗಲ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.ಖಚಿತ ಮಾಹಿತಿಯ ಮೇರೆಗೆ ಶ್ರೀನಿವಾಸ ಪುರದಲ್ಲಿ ಪೊಲೀಸರು ಇದೀಗ ತಾಯಿ ಹಾಗೂ ಮೂರು ಮಕ್ಕಳನ್ನು ಪತ್ತೆಹಚ್ಚಿದ್ದಾರೆ.ತಾಯಿ ಮಕ್ಕಳನ್ನು ಕುಣಿಗಲ್ ಪೊಲೀಸರು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊಸೂರಿನ ಮೂರು ಮಕ್ಕಳಾದ ತನುಶ್ರೀ (8) ಭೂಮಿಕ (6) ಯೋಗಿತಾ (4) ಜೊತೆ ವಸಂತ ಕುಮಾರಿ (25) ಎನ್ನುವ ತಾಯಿ ನಾಪತ್ತೆಯಾಗಿದ್ದಾಳೆ. ಜನವರಿ 16ರಂದು ತಾಯಿ ಹಾಗೂ ಮೂವರು ಮಕ್ಕಳು ನಾಪತ್ತೆಯಾಗಿದ್ದರು .ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.