ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರು, ನಮಗೆ ಬಂದ ಮಾಹಿತಿ ಪ್ರಕಾರ ಡಿಕೆಶಿ ಹೈಕಮಾಂಡ್ ಮುಂದೆ ಶಾಸಕರ ಪರೇಡ್ ಮಾಡಲು ಹೋಗುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸುನೀಲ್ಕುಮಾರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತಮ್ಮ ಪರ ಎಷ್ಟು ಶಾಸಕರ ಬಲ ಇದೆ ಎಂದು ಹೈಕಮಾಂಡ್ ಶಕ್ತಿಪ್ರದರ್ಶನ ಮಾಡಲು ಡಿಕೆಶಿ ಮುಂದಾಗಿದ್ದಾರೆ ಎಂದೂ ಅವರು ನುಡಿದರು.
ದೆಹಲಿಯಲ್ಲಿ ಕಾಂಗ್ರೆಸ್ ಶಾಸಕರಿಂದ ಪ್ರತಿಭಟನೆ ಬಗ್ಗೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಘೋಷಣೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದರು. ಕೇಂದ್ರದಿಂದ ಅನುದಾನ ಬಂದಿಲ್ಲವೆಂದು ಕಾಂಗ್ರೆಸ್ ಶಾಸಕರು ದೆಹಲಿಯಲ್ಲಿ ಪ್ರತಿಭಟನೆ ಮಾಡ್ತೀವಿ ಅಂದಿರೋದು ಹಾಸ್ಯಾಸ್ಪದ ವಿಚಾರ. ಡಿಕೆ ಸುರೇಶ್ ಹೇಳಿಕೆಯಿಂದ ಆಗುವ ಹಾನಿ ತಪ್ಪಿಸಲು ಈ ಹೇಳಿಕೆ ಮೂಲಕ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.
ಅನುದಾನ ಬಂದಿಲ್ಲ ಅಂತ ಹತ್ತಾರು ಸಲ ಸುಳ್ಳು ಹೇಳಿ ಕಾಂಗ್ರೆಸ್ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಕೇಂದ್ರದಿಂದ ಎಷ್ಟು ಅನುದಾನ ಬಂದಿದೆ ಅಂತ ನಾವು ಚರ್ಚೆಗೆ ಸಿದ್ಧರಿದ್ದೇವೆ. ಹತ್ತು ವರ್ಷದ ಯುಪಿಎ ಅವಧಿಯಲ್ಲಿ ಎಷ್ಟು ಬಂದಿದೆ, ಮೋದಿಯವರ ಅವಧಿಯಲ್ಲಿ ಎಷ್ಟು ಬಂದಿದೆ ಅಂತ ಕಾಂಗ್ರೆಸ್ ಶ್ವೇತಪತ್ರ ಹೊರಡಿಸಲಿ; ನೀವು ದೆಹಲಿ ಫ್ಲೈಟ್ ಹತ್ತುವ ಮುನ್ನ ಶ್ವೇತ ಪತ್ರ ಹೊರಡಿಸಿ ಎಂದು ಸವಾಲು ಹಾಕಿದರು.
ಮಂಡ್ಯದಲ್ಲಿ ಹೆಚ್ಡಿಕೆ ಕೇಸರಿ ಶಾಲು ಧರಿಸಿದ್ದ ಬಗ್ಗೆ ದೇವೇಗೌಡರ ವಿರೋಧ ವಿಚಾರದ ಕುರಿತು ಪ್ರಶ್ನಿಸಿದಾಗ ಪ್ರತಿಕ್ರಿಯೆ ಕೊಡಲು ಸುನೀಲ್ ಕುಮಾರ್ ಅವರು ನಕಾರ ಸೂಚಿಸಿದರು.
BIG NEWS: ಗದಗ ‘ಕಟೌಟ್ ದುರಂತ’: ಗಾಯಾಳುಗಳ ನೆರವಿಗೆ ಧಾವಿಸಿದ ‘ನಟ ಯಶ್’, 1 ಲಕ್ಷ ನೆರವು