ವಾರಾಣಾಸಿ : ಜ್ಞಾನವಾಪಿ ಮಸೀದಿಯ ವ್ಯಾಸ್ ನೆಲಮಾಳಿಗೆಯಲ್ಲಿ ಹಿಂದೂ ಪ್ರಾರ್ಥನೆಗೆ ಅವಕಾಶ ನೀಡಿದ ವಾರಣಾಸಿ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ನ್ಯಾಯಾಲಯವು ತನ್ನ ಅರ್ಜಿಯನ್ನು ತಿದ್ದುಪಡಿ ಮಾಡಿ ಫೆಬ್ರವರಿ 6 ರಂದು ಹಿಂತಿರುಗುವಂತೆ ಮುಸ್ಲಿಂ ಕಡೆಯವರಿಗೆ ಸೂಚಿಸಿದೆ.
ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಏಕಸದಸ್ಯ ಪೀಠವು ಜ್ಞಾನವಾಪಿ ಮಸೀದಿ ಆವರಣದ ಒಳಗೆ ಮತ್ತು ಹೊರಗೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಅಡ್ವೊಕೇಟ್ ಜನರಲ್ಗೆ ಆದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 6 ರಂದು ನಡೆಯಲಿದೆ.
ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆ ನಡೆಸಲು ಅನುಮತಿ ನೀಡಿದ ಜಿಲ್ಲಾ ನ್ಯಾಯಾಧೀಶರ ಆದೇಶವನ್ನ ಪ್ರಶ್ನಿಸಿ ಮಸೀದಿ ಸಮಿತಿಯು ಈ ಹಿಂದೆ ಸುಪ್ರೀಂ ಕೋರ್ಟ್’ನ್ನ ಸಂಪರ್ಕಿಸಿತ್ತು. ಆದಾಗ್ಯೂ, ಸುಪ್ರೀಂ ಬದಲಿಗೆ ಅಲಹಾಬಾದ್ ಹೈಕೋರ್ಟ್ ಸಂಪರ್ಕಿಸುವಂತೆ ಮಸೀದಿ ಸಮಿತಿಗೆ ತಿಳಿಸಲಾಯಿತು.
‘ಆರ್ಬಿಐ’ ನಿರ್ಬಂಧ: ‘ಪೇಟಿಎಂ’ ಫೆ.29 ರ ನಂತರವೂ ಕಾರ್ಯನಿರ್ವಹಿಸುತ್ತದೆ:CEO ವಿಜಯ್ ಶೇಖರ್ ಶರ್ಮಾ ಸ್ಪಷ್ಟನೆ
BREAKING: ನೂತನ ರಾಜಕೀಯ ಪಕ್ಷವನ್ನು ಸ್ಥಾಪಿಸಿದ ತಮಿಳು ನಟ ‘ವಿಜಯ್’ : ‘ತಮಿಳ ವೆಟ್ರಿ ಕಳಗಂ’ ಎಂದು ನಾಮಕರಣ
BREAKING:ಜಾರ್ಖಂಡ್ ಮಾಜಿ ಸಿಎಂ ‘ಹೇಮಂತ್ ಸೊರೆನ್’ ರನ್ನು 5 ದಿನಗಳ ಕಾಲ ‘ಕಸ್ಟಡಿಗೆ’ ಕಳುಹಿಸಿದ ‘ಇಡಿ’