ಬೆಳಗಾವಿ : ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಒತ್ತಡ ವಿಚಾರಕ್ಕೆ ಕಾಂಗ್ರೆಸ್ MLC ಪ್ರಕಾಶ್ ಹುಕ್ಕೇರಿ ಸಿಟ್ಟಾಗಿದ್ದು ನಾನು ಏನಾದರೂ ಫುಟ್ಬಾಲ? ಎಂದು ಪ್ರಕಾಶ್ ಹುಕ್ಕೇರಿ ಪ್ರಶ್ನಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ ಈ ಹೇಳಿಕೆಯನ್ನು ನೀಡಿದ ಅವರು, ಈ ಹಿಂದೆ ನನ್ನನ್ನು ದೆಹಲಿಗೆ ಹೋಗಿ ಎಂದು ಒಗೆದರು ಎಂದು ಕೆರೂರು ಗ್ರಾಮದಲ್ಲಿ ಕಾಂಗ್ರೆಸ್ ಎಂಎಲ್ಸಿ ಪ್ರಕಾಶ್ ಹುಕ್ಕೇರಿ ಸ್ವಪಕ್ಷದ ವಿರುದ್ಧವೇ ಸಿಟ್ಟಾಗಿರುವ ಘಟನೆ ಜರುಗಿತು. ಈ MP ಚುನಾವಣೆಗೆ ನಿಲ್ಲು ಅಂತಿದಾರೆ. ಮತ್ತೆ ದಿಲ್ಲಿಗೆ ಹೋಗಿ ಬೀಳಬೇಕು ನಾನೇನು ಫುಟ್ಬಾಲ? ಎಂದರೂ.
ಸಿಎಂ ನಿಲ್ಲಬೇಕು ಅಂತ ಹೇಳಿದರೆ ಅವರಿಗೆ ಏನಾದರೂ ನಾನು ಬರೆದು ಕೊಟ್ಟಿದ್ದನಾ? ನನ್ನನ್ನು ಏನಾದರೂ ಫುಟ್ಬಾಲ್ ಆಗಿ ಮಾಡಿಕೊಂಡಿದ್ದೀರಾ? ನಾನು ಲೋಕಸಭಾ ರಾಜ್ಯಸಭಾ ಚುನಾವಣೆಗೆ ನಿಲ್ಲುವುದಿಲ್ಲ. ಚಿಕ್ಕೋಡಿ ಅಭ್ಯರ್ಥಿ ಯಾರು ಅಂತ ಹೈಕಮಾಂಡ್ ಹೇಳಬೇಕು. ನನಗೆ ಎಷ್ಟೇ ಒತ್ತಡ ಹೇರಿದರೂ ಕೂಡ ಲೋಕಸಭೆ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ನಾನು ಶಿಕ್ಷಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತೇನೆ.
ಶಿಕ್ಷಕರ ಸೇವೆ ಮಾಡಲು ನನ್ನ ಆಯ್ಕೆ ಮಾಡಿದ್ದಾರೆ. ಚುನಾವಣೆಗೆ ನಿಲ್ಲಲು ನನ್ನನ್ನು ಆಯ್ಕೆ ಮಾಡಿಲ್ಲ. ವರ್ಷ ಒಂದು ವರೆ ವರ್ಷಕ್ಕೊಮ್ಮೆ ಒಗೆಯುತ್ತಾರೆ.ಇದೇನು ಫುಟ್ಬಾಲ್ ಮ್ಯಾಚ ಎಂದು ಪ್ರಕಾಶ್ ಹುಕ್ಕೇರಿ ಪ್ರಶ್ನಿಸಿದ್ದಾರೆ.ನನ್ನ ಅವಧಿ ಇನ್ನು ಐದು ವರ್ಷ ಇದೆ ಸಾಕಷ್ಟು ಕೆಲಸ ಮಾಡಿದ್ದೇನೆ. ಶಿಕ್ಷಕರ ಸಾಕಷ್ಟು ಬೇಡಿಕೆಗಳು ಈಡೇರಿಸಬೇಕಿದೆ ಇಲ್ಲೇ ಕೆಲಸ ಮಾಡುವೆ ಎಂದು ಕೆರೂರ್ ಗ್ರಾಮದಲ್ಲಿ ಕಾಂಗ್ರೆಸ್ ಎಂಎಲ್ಸಿ ಪ್ರಕಾಶ್ ಹುಕ್ಕೇರಿ ತಿಳಿಸಿದರು.