ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನನ್ನ ಜೊತೆಗೆ ಯಾರೆಲ್ಲ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ರೋ, ಅವರೆಲ್ಲ ಮತ್ತೆ ಬಿಜೆಪಿ ಸೇರಲಿದ್ದಾರೆ ಎಂಬುದಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ.
ಒಂದೆಡೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಂತ ಲಕ್ಷ್ಮಣ್ ಸವದಿ, ನಾನು ಕಾಂಗ್ರೆಸ್ ಬಿಟ್ಟು ಮತ್ತೆ ಬಿಜೆಪಿ ಸೇರಲ್ಲ ಎನ್ನುತ್ತಿದ್ದಾರೆ. ಈ ಬೆನ್ನಲ್ಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತ್ರ ನನ್ನ ಜೊತೆ ಕಾಂಗ್ರೆಸ್ ಸೇರಿದವರು ಮತ್ತೆ ಬಿಜೆಪಿ ವಾಪಾಸ್ ಆಗ್ತಾರೆ ಎಂಬುದಾಗಿ ಹೇಳುತ್ತಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನ್ನ ಜೊತೆಗೆ ಕಾಂಗ್ರೆಸ್ ಸೇರಿದಂತ ಹಲವರು ನನ್ನ ಸಂಪರ್ಕದಲ್ಲೇ ಇದ್ದಾರೆ. ಅವರೆಲ್ಲ ಕಾಂಗ್ರೆಸ್ ಪಕ್ಷವನ್ನು ತೊರೆದು, ಮರಳಿ ಬಿಜೆಪಿ ಸೇರಲಿದ್ದಾರೆ ಎಂದರು.
ಆದಷ್ಟು ಶೀಘ್ರದಲ್ಲೇ ಕಾಂಗ್ರೆಸ್ ಸೇರಿದ್ದಂತ ಬಿಜೆಪಿಗರು ಮರಳಿ ಗೂಡಿಗೆ ಸೇರಲಿದ್ದಾರೆ. ಕಾಂಗ್ರೆಸ್ ನಲ್ಲಿ ಪಕ್ಷದ ವರ್ಚಸ್ಸು ಇಲ್ಲ. ಹೀಗಾಗಿ ಕೈ ತೊರೆದು ಹಲವರು ಬಿಜೆಪಿ ಸೇರುವಂತ ಮನಸ್ಸಿ ಮಾಡಿದ್ದಾರೆ ಎಂದು ತಿಳಿಸಿದರು.
“ಸ್ವೀಟ್ ಸ್ಪಾಟ್ , ಅನೇಕ ಉದ್ಯೋಗಾವಕಾಶಗಳು” : ‘ಮಧ್ಯಂತರ ಬಜೆಟ್’ಗೆ ‘ಪ್ರಧಾನಿ ಮೋದಿ’ ಫುಲ್ ಮಾರ್ಕ್ಸ್
BREAKING : ಜ್ಞಾನವಾಪಿ ನೆಲಮಾಳಿಗೆಯಲ್ಲಿ ‘ಪೂಜೆ’ಗೆ ವಿರೋಧ, ಹೈಕೋರ್ಟ್ ಮೊರೆಯೋದ ‘ಮಸೀದಿ ಸಮಿತಿ’