ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2024ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ನೋಂದಣಿ ದಿನಾಂಕವನ್ನು ವಿಸ್ತರಣೆ ಮಾಡಿ ಆದೇಶವನ್ನು ಹೊರಡಿಸಿದೆ.
ಇದೇ ವೇಳೆ ಆದೇಶದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ Karnataka Examinations Authority ಸಂಖ್ಯೆ: ಇಡಿ/ಕೆಇಎ/ಪತ್ರಿಕಾ ಪ್ರಕಟಣೆ/2024 KKEAದಿನಾಂಕ: 31-01-2024 ಸಿಇಟಿ-2024ಕ್ಕೆ ನೊಂದಣಿ ಹಾಗು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಆನ್‌ಲೈನ್ ಅರ್ಜಿ ಸಲ್ಲಿಸದೆ ಇರುವ ಹಾಗು ಶುಲ್ಕವನ್ನು ಪಾವತಿಸದೆ ಇರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ದಿನಾಂಕ 18-04-2024 ಮತ್ತು 19-04-2024 ರಂದು ನಡೆಸಲಾಗುವ ಸಿಇಟಿ-2024ಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 20-02-2024 ರ ರಾತ್ರಿ 11.59 ರವರೆಗೆ ಹಾಗು 23-02-2024 ರ ಸಂಜೆ 5.30 ರವರೆಗೆ ಶುಲ್ಕ ಪಾವತಿಸಲು ದಿನಾಂಕವನ್ನು ವಿಸ್ತರಿಸಲಾಗಿರುತ್ತದೆ ಅಂಥ ತಿಳಿಸಿದೆ.
ಅರ್ಜಿ ಪ್ರಕ್ರಿಯೆಯನ್ನು ಜನವರಿ 10, 2024 ರಂದು ಪ್ರಾರಂಭಿಸಲಾಯಿತು. ವಿಸ್ತೃತ ವೇಳಾಪಟ್ಟಿಯ ಪ್ರಕಾರ, ಅಭ್ಯರ್ಥಿಗಳು ಫೆಬ್ರವರಿ 23, 2024 ರವರೆಗೆ ಅರ್ಜಿ ಶುಲ್ಕವನ್ನು ವೆಬ್ಸೈಟ್ ಮೂಲಕ ಪಾವತಿಸಬಹುದು. ಆನ್ಲೈನ್ ಸಿಇಟಿ ಅರ್ಜಿ 2024 ರಲ್ಲಿ ಅಭ್ಯರ್ಥಿಯ ಅಧ್ಯಯನ ವಿವರಗಳನ್ನು ಶಾಲಾ ಶಿಕ್ಷಣದಿಂದ ಅಭ್ಯರ್ಥಿಯು ನಮೂದಿಸಿದ ಎಸ್ಎಟಿಎಸ್ ಸಂಖ್ಯೆಯ ಮೂಲಕ ಪಡೆಯಲಾಗುತ್ತದೆ.
ಕೆಇಎಯಲ್ಲಿ ನೋಂದಾಯಿಸಿಕೊಳ್ಳದ ಅಭ್ಯರ್ಥಿಗಳು ದಿನಾಂಕ 20-02-2024 ರಂದು ರಾತ್ರಿ 11.59 ರವರೆಗೆ ಆನ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ಸಿಇಟಿ-2024 ಗಾಗಿ 23-02-2024 ರ ಸಂಜೆ 5.30 ರವರೆಗೆ ಶುಲ್ಕವನ್ನು ಪಾವತಿಸಬಹುದು. ವಿದ್ಯಾರ್ಥಿ ಸಮುದಾಯದ ಕಲ್ಯಾಣಕ್ಕಾಗಿ, 18-04-2024 ಮತ್ತು 19-04-2024 ರಂದು ನಿಗದಿಯಾಗಿರುವ ಸಿಇಟಿ-2024 ರ ದಿನಾಂಕಗಳನ್ನು ವಿಸ್ತರಿಸಲಾಗಿದೆ” ಎಂದು ಅಧಿಕೃತ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.