ಬೆಂಗಳೂರು: ನಮ್ಮ ಮೆಟ್ರೊದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವುದು ಅಥವಾ ನಿಯಮ ಉಲ್ಲಂಘನೆ ಮಾಡಿದರೆ 10 ಸಾವಿರ ರೂ. ದಂಡ ಪಾವತಿಸಬೇಕು. ಜತೆಗೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಲಿದೆ. ಮೆಟ್ರೊದಲ್ಲಿ ಮಿತಿಮೀರುತ್ತಿರುವ ಅಸಭ್ಯ ವರ್ತನೆಗೆ ಕಡಿವಾಣ ಹಾಕಲು ಬಿಎಂಆರ್ಸಿಎಲ್ ಮುಂದಾಗಿದೆ.
ಕೇಂದ್ರ ಸರಕಾರದ ಸೂಚನೆ ಮೇರೆಗೆ ಬಿಎಂಆರ್ ಸಿಎಲ್ ಹೊರಡಿಸಿದೆ. ಮೊದಲು ರೂ. ದಂಡ ವಿಧಿಸಲಾಗುತ್ತಿತ್ತು. ಇದೀಗ ದಂಡದ ಮೊತ್ತವನ್ನು 10 ಸಾವಿರ ರೂ.ಗಳಿಗೆ ದಂಡದ ದಂಡ ಪರಿಷ್ಕರಣೆ ಮಾಡಿ ಆದೇಶ ಮೊತ್ತ ಅನುಚಿತ ವರ್ತನೆ ತೋರಿದಲ್ಲಿ ಪರಿಷ್ಕರಣೆ ಮೆಟ್ರೊ ಕಾಯಿದೆ ಪ್ರಕಾರ 500 ಹೆಚ್ಚಿಸಲಾಗಿದೆ.
ಇತ್ತೀಚೆಗೆ ನಮ್ಮ ಮೆಟ್ರೊದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿರುವ ಬಗ್ಗೆ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಕೆಲ ದಿನಗಳ ಹಿಂದಷ್ಟೇ ಮೆಟ್ರೊ ಪ್ರಯಾಣದ ವೇಳೆ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಅಸಭ್ಯ ವರ್ತನೆ ತೋರಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಪದೇಪದ ಈ ರೀತಿಯ ವರ್ತನೆಗಳು ಮರುಕಳಿಸಿದ್ದರಿಂದ ಮಹಿಳಾ ಪ್ರಯಾಣಿಕರು ಬೇಸತ್ತು ಹೋಗಿದ್ದರು. ಹೀಗಾಗಿ, ಅನುಚಿತವಾಗಿ ವರ್ತಿಸುವವರ ವಿರುದ್ಧ ಬಿಎಂಆರ್ ಸಿಎಲ್ ದಂಡಾಸ್ತ್ರ ಪ್ರಯೋಗಿಸಿದೆ.
1.ಖಾಸಗಿ ಶಾಲೆ ಶಿಕ್ಷಕಿಗೆ ಕಿರುಕುಳ
ಡಿ.25ರಂದು ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಸಾಯಂಕಾಲ 6.45ರ ಸುಮಾರಿಗೆ ನ್ಯಾಷನಲ್ ಕಾಲೇಜಿನಿಂದ ಮೆಜೆಸ್ಟಿಕ್ ಮೆಟ್ರೊದಲ್ಲಿ ಬರುತ್ತಿದ್ದರು. ಪ್ರಯಾಣಿಕರು ಹೆಚ್ಚಿದ್ದರಿಂದ ಬೋಗಿಯೂ ಭರ್ತಿಯಾಗಿತ್ತು. ಮೆಜೆಸ್ಟಿಕ್ ನಲ್ಲಿ ಇಳಿಯುವ ವೇಳೆ ಹಿಂದೆ ನಿಂತಿದ್ದ ಯುವಕನೊಬ್ಬ, ಸಂತ್ರಸ್ತೆಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಮೆಟ್ರೊ ಭದ್ರತಾ ಸಿಬ್ಬಂದಿ ಯುವಕನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಸಂತ್ರಸ್ತೆ ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
2.ಟೆಕ್ಕಿ ಜತೆ ಅಸಭ್ಯ ವರ್ತನೆ
ಡಿ.9ರಂದು ಮೆಟ್ರೊ ರೈಲಿನಲ್ಲಿ ಮಹಿಳಾ ಐಟಿ ಉದ್ಯೋಗಿಯಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ ಯುವಕನನ್ನು ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. 22 ವರ್ಷದ ಮಹಿಳಾ ಟೆಕ್ಕಿಯೊಬ್ಬರು ರಾಜಾಜಿನಗರ ನಿಲ್ದಾಣದಲ್ಲಿ ಮೆಟ್ರೊ ರೈಲು ಹತ್ತಿದ್ದರು. ರೈಲು ನಾಡಪ್ರಭು ಕೆಂಪೇಗೌಡ ನಿಲ್ದಾಣ ಸಮೀಪಿಸುತ್ತಿದ್ದಂತೆ ಪ್ರಯಾಣಿಕರ ಜನಸಂದಣಿ ಹೆಚ್ಚಾಗಿತ್ತು. ಆ ವೇಳೆ ಆರೋಪಿ, ಯುವತಿಯ ಹಿಂಬದಿಯಲ್ಲಿ ನಿಂತು ಮೈ ಮುಟ್ಟಿ ಅನುಚಿತವಾಗಿ ವರ್ತಿಸಿದ್ದ.
ಜನಸಂದಣಿ ಇರುವ ಹಿನ್ನೆಲೆಯಲ್ಲಿ ಒತ್ತಡದಲ್ಲಿ ಈ ರೀತಿ ಆಗಿರಬಹುದು ಎಂದು ಯುವತಿ ಭಾವಿಸಿ ಮೊದಲು ಸುಮ್ಮನಿದ್ದರು. ಆರೋಪಿಯು ಮತ್ತೆ ಇದೇ ರೀತಿ ವರ್ತಿಸಿದಾಗ ಯುವತಿ ರೈಲಿನೊಳಗೆ ಜೋರಾಗಿ ಕೂಗಿ ಪ್ರತಿಭಟಿಸಿದ್ದರು. ರೈಲು ಮೆಜೆಸ್ಟಿಕ್ ನಿಲ್ದಾಣ ತಲುಪುತ್ತಿದ್ದಂತೆಯೇ ಆರೋಪಿ ಇಳಿದು ಓಡಲು ಪ್ರಾರಂಭಿಸಿದ್ದ. ಆಗ ಯುವತಿ ಮತ್ತು ಸಾರ್ವಜನಿಕರು ಜೋರಾಗಿ ಕೂಗಿ ಆತನನ್ನು ಹಿಡಿಯುವಂತೆ ಕೋರಿದ್ದ ರು. ಇದನ್ನು ಗಮನಿಸಿದ ಮೆಟ್ರೊ ಭದ್ರತಾ ಸಿಬ್ಬಂದಿ ಆರೋಪಿಯನ್ನು ಹಿಡಿದು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದರು.