ಬೆಂಗಳೂರು: ಸರ್ಕಾರ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇಕಡ 185 ರಿಂದ 195ಕ್ಕೆ ಹೆಚ್ಚಳ ಮಾಡಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ಬಾಟಲಿಗೆ 5 ರೂ. ನಿಂದ 12 ರೂಪಾಯಿವರೆಗೆ ಬಿಯರ್ ದರ ಹೆಚ್ಚಳವಾಗಿದೆ ಎನ್ನಲಾಗಿದೆ.
ಅಬಕಾರಿ ಇಲಾಖೆ ಮೊದಲಿಗೆ ಸುಂಕ ಹೆಚ್ಚಳ ಕುರಿತಂತೆ ಕರಡನ್ನು ಪ್ರಕಟಿಸಿತ್ತು. ಬಳಿಕ ಸಲ್ಲಿಕೆಯಾದ ಆಕ್ಷೇಪಣೆ ಪರಿಗಣಿಸಿ ಇದೀಗ ಸುಂಕ ಏರಿಕೆಯ ಕುರಿತು ಬುಧವಾರ ಅಂತಿಮ ಆದೇಶ ಹೊರಡಿಸಿದೆ. ಅದರಂತೆ ಬಿಯರ್ ದರ ಹೆಚ್ಚಳವಾಗಲಿದೆ. ಅಬಕಾರಿ ಇಲಾಖೆ ಮೊದಲಿಗೆ ಸುಂಕ ಹೆಚ್ಚಳ ಕುರಿತಂತೆ ಕರಡನ್ನು ಪ್ರಕಟಿಸಿತ್ತು. ಬಳಿಕ ಸಲ್ಲಿಕೆಯಾದ ಆಕ್ಷೇಪಣೆ ಪರಿಗಣಿಸಿ ಇದೀಗ ಸುಂಕ ಏರಿಕೆಯ ಕುರಿತು ಬುಧವಾರ ಅಂತಿಮ ಆದೇಶ ಹೊರಡಿಸಿದೆ. ಅದರಂತೆ ಬಿಯರ್ ದರ ಹೆಚ್ಚಳವಾಗಲಿದೆ. ಅಂದ ಹಾಗೇ ಸಾಮಾನ್ಯ ಬ್ರಾಂಡ್ಗಳಿಂದ ಪ್ರೀಮಿಯಂ ಬ್ರಾಂಡ್ಗಳವರೆಗೆ ಎಲ್ಲಾಬಗೆಯ ಬಿಯರ್ ದರ ಹೆಚ್ಚಳವಾಗಲಿದೆ. ರಾಜ್ಯದಲ್ಲಿ ಬಿಯರ್ ದರ ಹೆಚ್ಚಳವಾಗುತ್ತಿರುವುದು ಕಳೆದ ಏಳು ತಿಂಗಳಲ್ಲಿಇದು ಮೂರನೇ ಬಾರಿ ಆಗಿದೆ.