ಬೆಂಗಳೂರು : ವಿವಿಧ ಇಲಾಖೆಗಳಲ್ಲಿನ ಯೋಜನೆಗಳು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನವಾಗುವ ಬಗ್ಗೆ ಕ್ಷೇತ್ರಮಟ್ಟದ ಪ್ರಗತಿ ವೀಕ್ಷಣೆಗೆ ಪೂರಕವಾಗಿ ಅಭಿವೃದ್ಧಿ ಪಡಿಸಿರುವ ‘ಪ್ರಗತಿ’ ಮೊಬೈಲ್ ಅಪ್ಲಿಕೇಶನ್ ತಂತ್ರಾಂಶಕ್ಕೆ ಸಿದ್ದರಾಮಯ್ಯ ಬುಧವಾರ ಚಾಲನೆ ನೀಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣ ದಲ್ಲಿ ಜಿಲ್ಲಾ ಉಸ್ತುವಾರಿ ಕಾವ್ಯದರ್ಶಿಗಳ ಸಭೆ ನಡೆಸಿದ ಅವರು, ಕ್ಷೇತ್ರಮಟ್ಟದ ಪ್ರಗತಿ ವೀಕ್ಷ ಣೆಗೆ ಪೂರಕವಾಗಿ ಅಭಿವೃದ್ಧಿ ಪಡಿಸಿರುವ ಆ್ಯಪ್ನ ತಂತ್ರಾಂಶಕ್ಕೆ ಚಾಲನೆ ನೀಡಿದರು.
ಪ್ರಗತಿ ಮೊಬೈಲ್ ಅಪ್ಲಿಕೇಶನ್ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಮೇಲ್ವಿಚಾರಣೆಗೆ ಸಹಾಯಕಾರಿಯಾಗಲಿದೆ. ಪ್ರತಿಯೊಂದು ಹಂತವನ್ನೂ ತೋರಿಸುವುದರಿಂದ ಅಧಿಕಾರಿಗಳು ಪೂರಕವಾಗಿ ಕೆಲಸ ಮಾಡಲುಹಾಗೂಯಾವಹಂತದಲ್ಲಾದರೂ ಸಮಸ್ಯೆ ಸೃಷ್ಟಿಯಾಗಿದ್ದರೆ ಪರಿಹರಿಸಲು ಸಹಾಯಮಾಡುತ್ತದೆ ಎಂದು ಅಧಿಕಾರಿಗಳು ವಿವರಣೆ ನೀಡಿದರು.
ಅನುದಾನದ ಪರಿಣಾಮಕಾರಿ ಬಳಕೆ, ಅಧಿಕಾರಿಗಳ ಕಾರನಿರ್ವಹಣೆ ಬಗ್ಗೆ ನಿಗಾ ವಹಿಸುವುದು. ವೇಗವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ತೆಗೆದುಕೊಳ್ಳಬೇಕಿ ರುವ ಕ್ರಮಗಳ ಬಗ್ಗೆ ಮೇಲಿನ ಹಂತದ ಅಧಿ ಕಾರಿಗಳಿಗೆ ಸ್ಪಷ್ಟತೆ ನೀಡುತ್ತದೆ. ಸದ್ಯಕ್ಕೆ ತಂತ್ರಾಂಶ ಸಿದ್ಧಪಡಿಸಿದ್ದು, ಆ್ಯಪ್ ಕೂಡ ಸಿದ್ಧವಾಗಿದೆ. ಯೂಸರ್ ಐಡಿ ಹೊಂದಿರುವ ವರು ಮಾತ್ರ ಬಳಕೆ ಮಾಡಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ರಾಜಕೀಯ ಕಾವ್ಯದರ್ಶಿ ಗೋವಿಂದ ರಾಜು, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಅಭಿವೃದ್ಧಿ ಆಯುಕ್ತ ಶಾಲಿನಿ ರಜನೀಶ್ ಸೇರಿ ಇತರರು ಹಾಜರಿದ್ದರು.