ಉತ್ತರ ಪ್ರದೇಶ: ಜ್ಞಾನವಾಪಿ ಮಸೀದಿ ವಿವಾದದ ಪ್ರಕರಣದಲ್ಲಿ ಈಗ ಹಿಂದೂಗಳಿಗೆ ಬಹುದೊಡ್ಡ ಗೆಲುವು ಸಿಕ್ಕಿದೆ. ಅದೇ ಜ್ಞಾನವಾಪಿ ಮಸೀದಿಯಲ್ಲಿ ಇರುವಂತ ಶಿವಲಿಂಗಕ್ಕೆ ಪೂಜೆ ಸಲ್ಲಿಸುವಂತೆ ಕೋರ್ಟ್ ಅನುಮತಿ ನೀಡಿದೆ.
ಉತ್ತರ ಪ್ರದೇಶದ ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಈ ಸಂಬಂಧ ತೀರ್ಪು ನೀಡಿದ್ದು, ಮಸೀದಿಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿದೆ.
ಈ ಹಿಂದೆ ಜ್ಞಾನವಾಪಿ ಮಸೀದಿಯಲ್ಲಿನ ಎಎಸ್ಐ ವರದಿಯನ್ನು ಹಿಂದೂ-ಮುಸ್ಲೀಂ ಮುಖಂಡರಿಗೆ ನೀಡುವಂತೆ ಸೂಚನೆ ನೀಡಿತ್ತು. ಅಲ್ಲದೇ ಅವರು ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಪಡೆದಿದ್ದರು.
ಈ ಬೆನ್ನಲ್ಲಿ ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳು ಅಲ್ಲಿರುವಂತ ಶಿವಲಿಂಗಕ್ಕೆ ಪೂಜೆ ಮಾಡೋದಕ್ಕೆ ಅವಕಾಶ ನೀಡಿದೆ. ಈ ಮೂಲಕ ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳಿಗೆ ದೊಡ್ಡ ಗೆಲುವು ಸಿಕ್ಕಂತೆ ಆಗಿದೆ.
ಅಂದಾಹಗೇ ಜ್ಞಾನವಾಪಿಯ ಮುಚ್ಚಿದ 10 ಸೆಲಾರ್ ಗಳ್ಲಲಿ ಪೂಜೆ ಸಲ್ಲಿಸೋದಕ್ಕೆ ಜಿಲ್ಲಾ ನ್ಯಾಯಾಲಯ ಸೂಚಿಸಿದೆ. ಇದಕ್ಕಾಗಿ 7 ದಿನಗಳಲ್ಲಿ ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದೆ. ಬೇಸ್ಮೆಟ್ ನಲ್ಲಿ ಹಿಂದೂಗಳು ಪೂಜೆ ಸಲ್ಲಿಸಲು ಕೋರ್ಟ್ ಅನುಮತಿ ನೀಡಿದೆ.
BREAKING: ‘ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ’ರಾಗಿ ಬಿಸಿಸಿಐ ಕಾರ್ಯದರ್ಶಿ ‘ಜಯ್ ಶಾ’ ಮರು ನೇಮಕ
BREAKING : ಮೆಟ್ರೋ ಪ್ರಯಾಣಿಕರೇ ಹುಷಾರ್ : ಇನ್ನುಮುಂದೆ ಅಸಭ್ಯ ವರ್ತನೆ ತೋರಿದರೆ ಬೀಳುತ್ತೆ ದಂಡ