ಬೆಂಗಳೂರು : ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಇನ್ನು ಮುಂದೆ ಅತ್ಯಂತ ಹುಷಾರಾಗಿ ಇರಬೇಕಾಗುತ್ತದೆ. ಏಕೆಂದರೆ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸಹ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತನೆ ತೋರಿದರೆ 10 ಸಾವಿರ ದಂಡ ಬೀಳಲಿದೆ.
ಮೆಟ್ರೋದಲ್ಲಿ ಅಸಭ್ಯ ವರ್ತನೆ ತೋರಿದರೆ ಬೀಳುತ್ತೆ ದಂಡ ಯಾರಾದರೂ ಅನುಚಿತವಾಗಿ ವರ್ತಿಸಿದರೆ 10 ಸಾವಿರ ದಂಡ ಬೀಳುತ್ತದೆ ಎಂದು ಇದರ ಬಗ್ಗೆ ಬಿಎಮ್ಆರ್‌ಸಿಎಲ್ ಇಂದ ಆದೇಶ ಹೊರಬಂದಿದೆ ಎಂದು ತಿಳಿದು ಬಂದಿದೆ.
ಮೆಟ್ರೋ ನಿಲ್ದಾಣದಲ್ಲಿ ಆಗಿರಬಹುದು ಅಥವಾ ಮೆಟ್ರೋದಲ್ಲಿ ಸಂಚರಿಸುವಾಗ ಮಹಿಳೆಯರೊಂದಿಗೆ ಅನುಚಿತವಾಗಿ ಹಾಗೂ ಅಸಭ್ಯವಾಗಿ ವರ್ತನೆ ತೋರಿದರೆ 10,000 ದಂಡ ಬೀಳುತ್ತದೆ ಅಲ್ಲದೆ ಹುಚ್ಚಾಟಗಳು, ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವಾಗ ನಿಯಮ ಉಲ್ಲಂಘಿಸಿದರು ಕೂಡ 10,000 ದಂಡ ಬೀಳುತ್ತದೆ. ಆದ್ದರಿಂದ ಇನ್ನು ಮುಂದೆ ಮೆಟ್ರೋಲಿಯಲ್ಲಿ ಪ್ರಯಾಣಿಸುವವರು ಅತ್ಯಂತ ಜಾಗರೂಕರಾಗಿರಬೇಕು.