ಮಂಡ್ಯ : ಮಂಡ್ಯ ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಆ ಗ್ರಾಮದಲ್ಲಿ ಹಲವಾರು ಬೆಳವಣಿಗೆ ನಡೆದಿದ್ದು ಕಂಡು ಬಂದಿದೆ ಈ ಹಿನ್ನೆಲೆಯಲ್ಲಿ ಫೆಬ್ರವರಿ 7ರಂದು ಮಂಡ್ಯ ಜಿಲ್ಲೆ ಬಂದ್ಗೆ ಸಮಾನಮನಸ್ಕಾರ ವೇದಿಕೆ ಕರೆಕೊಟ್ಟಿದೆ ಎಂದು ತಿಳಿದು ಬಂದಿದೆ.
ರಸ್ತೆಗಳಲ್ಲಿ ಪುಂಡಾಟಿಕೆ ಮಾಡಿ ಕಲ್ಲುತೂರಾಟ ಮಾಡಿದ್ದಾರೆ.ಶಾಂತಿ ಸೌಹಾರ್ದತೆ ಕದಡುತ್ತಿರುವುದನ್ನು ಖಂಡಿಸುತ್ತೇವೆ.ಅನುಮತಿ ಪಡೆಯದೆ ಹನುಮಧ್ವಜ ಹಾಕಿರುವುದು ತಪ್ಪು. ಶಾಂತಿ ಕದಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಇದೇ ತಿಂಗಳು 22ರಂದು ಕೆರಗೋಡು ಗ್ರಾಮದಲ್ಲಿ 108 ಅಡಿ ಹನುಮಂತ್ ಧ್ವಜವನ್ನು ತರು ಗೊಳಿಸಿದ್ದನ್ನು ವಿರೋಧಿಸಿ ಹಿಂದೂ ಸಂಘಟನೆಗಳ ಹಾಗೂ ಬಿಜೆಪಿಯ ನಾಯಕರು ಇತ್ತೀಚಿಗೆ ಪ್ರತಿಭಟನೆ ಹಾಗೂ ಪಾದಯಾತ್ರೆ ಕೈಗೊಂಡು ವಿರೋಧಿಸಿದ್ದರು. ಅಲ್ಲದೆ ಪ್ರತಿಭಟನೆ ನಿಯಂತ್ರಿಸಲು ಪೊಲೀಸರು ಕೂಡ ಲಾಟಿಚಾರ್ ಕೂಡ ನಡೆಸಿದ್ದರು.