ಮಂಗಳೂರು: ಬಿಗ್ ಬಾಸ್ ಸೀಸನ್ 10 (Big Boss) ರಲ್ಲಿ ಡ್ರೋಣ್ ಪ್ರತಾಪ್ ಸೋಲು ಕಂಡಿದಕ್ಕೆ ಇಲ್ಲೊಬ್ಬ ವ್ಯಕ್ತಿ ತನ್ನ ಅರ್ಧ ಮೀಸೆ ಮತ್ತು ಗಡ್ಡವನ್ನು ಬೋಳಿಸಿಕೊಂಡಿದ್ದಾನೆ.
ಹೌದು, ದಕ್ಷಿಣ ಕನ್ನಡದ ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಝೈನುಲ್ ಆಬಿದ್ ಎಂಬುವವರು ಈ ರೀತಿ ಮಾಡಿದ್ದಾರೆ. ಝೈನುಲ್ ಈ ಬಾರಿ ಬಿಗ್‌ಬಾಸ್ ಸೀಸನ್‌ನಲ್ಲಿ ಡ್ರೋಣ್ ಪ್ರತಾಪ್ ವಿನ್ನರ್ ಆಗಿ ಹೊರಬರುತ್ತಾರೆ ಎಂದು ಹೇಳಿದ್ದರು, ಒಂದು ವೇಳೆ ಪ್ರತಾಪ್ ಗೆಲುವು ಕಾಣದೇ ಹೋದರೆ ನಾನು ನನ್ನ ಅರ್ಧ ಗಡ್ಡ, ಮೀಸೆ ತೆಗೆಯುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜ್ ಹಾಕಿ ಪೋಸ್ಟ್ ಮಾಡಿದ್ದರು, ಇದಲ್ಲದೇ ಹಸಿ ಮೆಣಸಿನಕಾಯಿ ತಿನ್ನುವುದಾಗಿ ಮತ್ತೊಂದು ವೀಡಿಯೋವನ್ನು ಕೂಡ ಹಾಕಿದ್ದರು.
ಈ ನಡುವೆ ಬಿಗ್ ಬಾಸ್’ ಕನ್ನಡ ಸೀಸನ್ 10ರಲ್ಲಿ ಪ್ರತಾಪ್‌ಗೆ ಗೆಲುವು ಕಂಡಿಲ್ಲ. ಈ ಹಿನ್ನಲೆಯಲ್ಲಿ ಝೈನುಲ್ ಅವರು ಅರ್ಧ ಮೀಸೆ ಮತ್ತು ಅರ್ಧ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. “ಇನ್ನು ಮಾತಾಡಿ ಪ್ರಯೋಜನವಿಲ್ಲ.. ನಾನುಕೊಟ್ಟ ಮಾತನ್ನು ತಪ್ಪಿದವನಲ್ಲ . ನನಗೆ ತುಂಬ ಭಯಂಕರ ಬೇಜಾರು ಆಗುತ್ತಿದೆ..” ಎಂದು ಹೇಳುತ್ತ ಅರ್ಧ ಮೀಸೆ & ಗಡ್ಡವನ್ನು ಟ್ರಿಮ್ಮರ್‌ನಿಂದ ತೆಗೆದು ಹಾಕಿದ್ದಾರೆ. ಇದನ್ನು ವಿಡಿಯೋ ಮಾಡಿ, ಅದನ್ನೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.