ಬೆಂಗಳೂರು: ಮಂಡ್ಯ ಕೆರಗೋಡಿನಲ್ಲಿ ನಡೆದಂತ ಹನುಮ ಧ್ವಜ ವಿವಾದದ ಬಗ್ಗೆ ನಿನ್ನೆ ಇಡೀ ದಿನ ಮಂಡ್ಯದಲ್ಲಿ ಬಿಜೆಪಿಯಿಂದ ಹೈಡ್ರಾಮಾವೇ ನಡೆಸಲಾಯಿತು. ಇದಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೂಡ ಸಾಥ್ ನೀಡಿದ್ರು. ಇಂತಹ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ. ಅದು ಏನು ಅಂತ ಮುಂದೆ ಓದಿ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಕುಮಾರಸ್ವಾಮಿನೇ ಪ್ರಚೋದನೆ ಮಾಡಿ ಗಲಾಟೆ ಎಬ್ಬಿಸಿರೋದು. ಜೆಡಿಎಸ್, ಬಿಜೆಪಿಯವರು ಜನಗಳನ್ನ ಪ್ರಚೋದನೆ ಮಾಡಿ ಗಲಾಟೆ ಎಬ್ಬಿಸಿರೋದು. ಶಾಂತಿಯನ್ನ ಕದಡಿರೋದು. ಈ ಘಟನೆಯಲ್ಲಿ ಕುಮಾರಸ್ವಾಮಿಯವರದ್ದು ತಪ್ಪು, ಬಿಜೆಪಿಯವರದ್ದು ತಪ್ಪು ಎಂಬುದು ಸ್ಪಷ್ಟವಾಗಿದೆ ಎಂಬುದಾಗಿ ಗಂಭೀರ ಆರೋಪ ಮಾಡಿದರು.
ಅಲ್ಲಿ ಪಂಚಾಯ್ತಿನಲ್ಲಿ ಪಂಚಾಯ್ತಿಯವರು ಇವರಿಗೆ ಪರ್ಮೀಷನ್ ಕೊಟ್ಟಿರೋದು ಯಾವ ಥರ? ಏನಂಥ ಕೊಟ್ಟಿರೋದು ಅಂದ್ರೆ ಧ್ವಜ ಸ್ಥಂಬದ ಮೇಲೆ ರಾಷ್ಟ್ರಧ್ವಜ ಹಾರಿಸಿ, ಅಥವಾ ಕನ್ನಡ ಧ್ವಜವನ್ನು ಹಾರಿಸಿ ಅಂತ ಹೇಳಿರೋದು. ಅದಕ್ಕೆ ಮುಚ್ಚಳಿಕೆ ಕೂಡ ಬರೆದುಕೊಟ್ಟಿದ್ದಾರೆ. ಹೀಗಿದ್ದೂ ಅವರು ಹಾರಿಸಿರೋದು ಮಾತ್ರ ಹನುಮಧ್ವಜ, ಭಾಗವಧ್ವಜ. ಅದರಿಂದ ಅಶಾಂತಿ ನಿರ್ಮಾಣವಾಗುತ್ತೆ ಅಲ್ವ. ಇದನ್ನ ಕ್ರಿಯೇಟ್ ಮಾಡಿದವರು ಯಾರು. ಮಿಸ್ಟರ್ ಕುಮಾರಸ್ವಾಮಿ, ಸಿಟಿ ರವಿ ಅವರು ಅಲ್ವ ಎಂಬುದಾಗಿ ಗರಂ ಆದರು.
ಇದು ಅಂಚೆ ಕಚೇರಿಯ ಅದ್ಭುತ ಯೋಜನೆ: ನೀವು ತುಂಬಾ ಬಡ್ಡಿಯನ್ನು ಪಡೆಯುತ್ತೀರಿ
AVGC-XR ತಂತ್ರಜ್ಞಾನದಿಂದ ರಾಜ್ಯದಲ್ಲಿ 30,000 ಉದ್ಯೋಗ ಸೃಷ್ಟಿ: ಸಿಎಂ ಸಿದ್ದರಾಮಯ್ಯ