ಬೆಳಗಾವಿ : ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಕೈಕೊಟ್ಟು ಬಿಜೆಪಿಗೆ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬೆನ್ನಲ್ಲೇ ಇದೀಗ ಶಾಸಕ ಲಕ್ಷ್ಮಣ ಸವದಿ ಕೂಡ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ವಿಚಾರವಾಗಿ ಬೆಳಗಾವಿಯಲ್ಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮಾತನಾಡಿ ಈ ವಿಷಯದ ಕುರಿತಾಗಿ ರಾಜ್ಯಾಧ್ಯಕ್ಷರು ಲಕ್ಷ್ಮಣ ಸವದಿ ಅವರನ್ನು ಪಕ್ಷಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಈ ವಿಷಯದ ಕುರಿತಾಗಿ ಮಾತನಾಡಿದ ಅವರು, ಸವದಿಯನ್ನು ಕರೆದುಕೊಂಡು ಬರುವ ಜವಾಬ್ದಾರಿ ಎಲ್ಲರ ಹೆಗಲ ಮೇಲಿದೆ. ನಾನು ಕಡಾಡಿ ರಮೇಶ್ ಕತ್ತಿ ಸೇರಿ ಜಿಲ್ಲೆಯ ನಾಯಕರ ಹೆಗಲ ಮೇಲೆ ಜವಾಬ್ದಾರಿ ಇದೆ ಕೇಂದ್ರ ಹಾಗೂ ರಾಜ್ಯದ ನಾಯಕರು ಮುಂದೆ ಅದನ್ನು ನೋಡಿಕೊಳ್ಳುತ್ತಾರೆ.
ಶಾಸಕ ಲಕ್ಷ್ಮಣ ಸವದಿ ಬಿಜೆಪಿಗೆ ಬರಲು ಅನ್ನುವುದು ನಮ್ಮ ಆಶಯವಾಗಿದೆ ಲಕ್ಷ್ಮಣ ಸವದಿ ಪಕ್ಷಕ್ಕೆ ಬಂದರೆ ಬೆಳಗಾವಿ ಜಿಲ್ಲೆಗೆ ಅನುಕೂಲವಾಗುತ್ತದೆ ನಮ್ಮ ಪಕ್ಷದಿಂದ ಹೊರಹೋದವರಿಗೆ ನಾವು ಆಹ್ವಾನವನ್ನು ಕೊಟ್ಟಿದ್ದೇವೆ ಅದೇ ರೀತಿ ಲಕ್ಷ್ಮಣ ಸವದಿಗೆ ಕೂಡ ನಾವು ಕೂಡ ಆಹ್ವಾನ ಕೊಟ್ಟಿದ್ದೇವೆ.
ಲಕ್ಷ್ಮಣ ಸವದಿಯನ್ನ ಕರೆಯಲು ರಾಜ್ಯಾಧ್ಯಕ್ಷರು ಸೇರಿ ಎಲ್ಲರು ಪ್ರಯತ್ನ ಮಾಡುತ್ತಿದ್ದಾರೆ ಚುನಾವಣೆಗೆ ಮುನ್ನ ಸವದಿ ಪಕ್ಷಕ್ಕೆ ಬಂದರೆ ಒಳ್ಳೆಯದಾಗುತ್ತದೆ ಲಕ್ಷ್ಮಣ ಸವದಿ ಬಿಜೆಪಿಗೆ ಬರಲು ತೋರಿಸಬಹುದು ಅನಿಸುತ್ತದೆ ಎಂದು ಬೆಳಗಾವಿಯಲ್ಲಿ ಬಿಜೆಪಿ ಸಂಸದ ಅಣ್ಣ ಸಾಹೇಬ್ ಜಿಲ್ಲೆ ತಿಳಿಸಿದರು.