ಬೆಂಗಳೂರು : ಯಾವುದೇ ಒಂದು ಕೊಲೆ ಯತ್ನ ಅಥವಾ ಕೊಲೆ ನಡೆಯಬೇಕಾದರೆ ಗಂಭೀರವಾದಂತಹ ಕಾರಣಗಳು ಇರುತ್ತವೆ ಹಾಗಾಗಿ ಕೊಲೆಗಳು ನಡೆಯುತ್ತವೆ ಆದರೆ ಇಲ್ಲಿ ಕೇವಲ ಗುರಾಯಿಸಿ ನಿಂದಿಸಿದಕ್ಕೆ ಪ್ರತಿಯೊಬ್ಬ ಇನ್ನೊಬ್ಬ ವ್ಯಕ್ತಿಗೆ ಚಾಕು ಇರಿದು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಟಿಬೇಗೂರು ಎಂಬಲ್ಲಿ ನಡೆದಿದೆ.
ಗುರಾಯಿಸಿ ನಿಂದಿಸಿದ ಆರೋಪ ಹಿನ್ನೆಲೆಯಲ್ಲಿ ಯುವಕನಿಗೆ ಚಾಕು ಇರಿದಿರುವ ಘಟನೆ ನೆಲಮಂಗಲ ತಾಲೂಕಿನ ಟಿ ಬೇಗೂರು ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮಂಜುನಾಥ್ ಎಂಬಾತನಿಂದ ಅಶ್ವತ್ ಕುಮಾರ್ ಗೆ ಚಾಕು ಇರಿತ ಘಟನೆ ನಡೆದಿದ್ದು ಸಿದ್ದಾರ್ಥ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಗಾಯಾಳು ಅಶ್ವಥಗೆ ಚಿಕಿತ್ಸೆ ನೀಡಲಾಗುತ್ತಿದೆ.
ಖಾಸಗಿ ಕಂಪನಿಯಲ್ಲಿ ಅಶ್ವತ್ ಕುಮಾರ್ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದ್ದು ಡಿಯೋ ಬೈಕ್ನಲ್ಲಿ ಬಂದು ಮಂಜುನಾಥ್ ಈ ಕೃತ್ಯ ಎಸೆಗೆ ಪರಾರಿಯಾಗಿದ್ದಾನೆ ಹಲ್ಲೆ ಮಾಡಿದ ಆರೋಪಿ ಮಂಜುನಾಥ್ ಗಾಗಿ ಇದೀಗ ಪೊಲೀಸ್ ಸರು ಬಲೆ ಬೀಸಿದ್ದಾರೆ. ನೆಲಮಂಗಲ ಗ್ರಾಮ ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.