ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮುಗ್ತಿಹಳ್ಳಿಯಲ್ಲಿರುವ ಆಂಬರ್ ವ್ಯಾಲಿ ವಸತಿ ಶಾಲೆಯಲ್ಲಿ ಸುಮಾರು 30 ಕಾಡಾನೆಗಳು ನಿನ್ನೆ ಬೀಡು ಬಿಟ್ಟಿದ್ದವು. ಆದರೆ ಅರಣ್ಯ ಸಿಬ್ಬಂದಿಗಳು ಪಟಾಕಿ ಸಿಡಿಸಿದ್ದರಿಂದ ಆಂಬರ್ ವ್ಯಾಲಿ ಶಾಲಾ ಅವರಣದಿಂದ ಸುಮಾರು 30 ಕಾಡಾನೆಗಳು ಹೊರಬಂದಿವೆ.
ಶಾಲೆಯ ಆವರಣದಲ್ಲಿ ಬಿಡು ಬಿಟ್ಟಿದ್ದ 30 ಕಾಡಾನೆಗಳನ್ನು ಸಿಬ್ಬಂದಿಗಳು ಓಡಿಸಿದ್ದಾರೆ. ಚಿಕ್ಕಮಗಳೂರಿನ ಹೊರವಲಯದಲ್ಲಿರುವ ಆಂಬರ್ ವ್ಯಾಲಿ ಶಾಲೆಯಲ್ಲಿ 30 ಕಾಡನೆಗಳು ಬೀಳ್ಬಿಟ್ಟಿದ್ದೆವು. ಸಿಬ್ಬಂದಿಗಳು ಈ ವೇಳೆ ಪಟಾಕಿ ಸಿಡಿಸಿದ್ದಾರೆ. ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಓಡಿಸಿದರೆ ಕತ್ರಿಮಿದ್ರಿ ಗ್ರಾಮ ಸೇರಿದಂತೆ 9 ಗ್ರಾಮದ ಜನರಲ್ಲಿ ಆತಂಕ ಮೂಡಿಸಿತ್ತು ಜನತೆಗೆ ಮನೆಯಿಂದ ಹೊರಬರದಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆ ಚಿಕ್ಕಮಗಳೂರು ಜಿಲ್ಲೆಯ ಮುಗ್ತಿಹಳ್ಳಿಯಲ್ಲಿರುವ ಆಂಬರ್ ವ್ಯಾಲಿ ವಸತಿ ಶಾಲೆಯಲ್ಲಿ ಸುಮಾರು 27 ಕಾಡಾನೆಗಳು ಆಗಮಿಸಿ ಬಿಡು ಬಿಟ್ಟಿರುವ ಹಿನೆಲೆಯಲ್ಲಿ ರಜೆ ಘೋಷಣೆ ಮಾಡಲಾಗಿತ್ತು.ಚಿಕ್ಕಮಗಳೂರು ತಾಲೂಕಿನ ಮುಗ್ತಿಹಳ್ಳಿ ಬಳಿ ಇರುವ ವಸತಿ ಶಾಲೆಯೊಳಗೆ ಸುಮಾರು 25ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿರುವ ಹಿನ್ನೆಲೆಯಲ್ಲಿ, ಶಾಲೆಯಲ್ಲಿರುವ ಇರುವ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಯಾವುದೇ ಕಾರಣಕ್ಕೂ ವಸತಿ ಶಾಲೆಯಿಂದ ಹೊರಗಡೆ ಬರಬೇಡಿ ಎಂದು ಅರಣ್ಯ ಇಲಾಖೆ ಸೂಚನೆ ನೀಡಿತ್ತು.
25 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಈ ಆಂಬರ್ ವ್ಯಾಲಿ ವಸತಿ ಶಾಲೆ ಇದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮುಗ್ತಿಹಳ್ಳಿ ಬಳಿಯ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ವಸತಿ ಶಾಲೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು.ಬಿಡು ಬಿಟ್ಟಿರುವ ಆನೆಗಳನ್ನು ಪುನಃ ಕಾಡಿಗೆ ಓಡಿಸಲು ಅರಣ್ಯ ಸಿಬ್ಬಂದಿ ಇದೀಗ ಯಶಸ್ವಿಯಾಗಿದ್ದಾರೆ.